ಹಾವೇರಿ : ಹಾವೇರಿಯಲ್ಲಿ ಅನುಮಾನಾಸ್ಪದವಾಗಿ CRPF ಕಾನ್ಸ್ಟೇಬಲ್ ಒಬ್ಬರ ಶವ ಪತ್ತೆಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಬಳಿ CRPF ಕಾನ್ಸ್ಟೇಬಲ್ ತಾರೇಶ್ ಎನ್ನುವವರ ಮೃತದೇಹ ಪತ್ತೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರ ಬಳಿ ಇಟ್ಟಿಗೆ ಬಟ್ಟಿಯೊಂದು ಇದ್ದು, ಅದರ ಹಿಂಭಾಗದಲ್ಲಿ ತಾರೇಶ್ ಮೃತ ದೇಹ ಪತ್ತೆಯಾಗಿದೆ. ಮೂಲತಹ ತಾರೇಶ್ ಹಾಸನ ಜಿಲ್ಲೆಯ ತಾಳನಕೋಪ್ಪಲು ಗ್ರಾಮದ ನಿವಾಸಿಯಾಗಿದ್ದಾರೆ. ಸದ್ಯ ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.