ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಕಳೆದ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಜೂನ್ 15ರಂದು ನಾಪತ್ತೆಯಾಗಿದ್ದ ನೆಟ್ಟಗೋಡು ಗ್ರಾಮದ ಶೋಭಾ (35) ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನೆಟ್ಟಗೋಡು ಗ್ರಾಮದ ನಿವಾಸಿ ಆಗಿರುವ ಶೋಭಾ ಕಳೆದ ಜೂನ್ 15ರಂದು ನಾಪತ್ತೆಯಾಗಿದ್ದರು. ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಶೋಭಾ ಮನೆ ತೊರೆದಿದ್ದರು. ಹೊನ್ನಾವರ ತಾಲೂಕಿನ ಹೊಳೆಯಲ್ಲಿ ಇಂದು ಶೋಭಾ ಅವರ ಶವ ಪತ್ತೆಯಾಗಿದೆ. ಶೋಭಾ ಹನುಮಂತ ಗೌಡ ಸಾವಿಗೆ ಏನು ಕಾರಣ ಎನ್ನುವುದು ತಿಳಿದುಬಂದಿಲ್ಲ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತಂತೆ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಶೋಭಾ ಅವರು ಶವವಾಗಿ ಪತ್ತೆಯಾಗಿದ್ದಾರೆ.