ಹಾವೇರಿ : ಸಾಂಬಾರ್ ಮೈ ಮೇಲೆ ಬಿದ್ದು ಗಾಯಗೊಂಡಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮಪುರ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ರುಕ್ಸಾನಾ ಬಾನು ಶೇಖ್ ಸನದಿ ಎನ್ನುವ ಬಾಲಕಿ ಸಾವನಪ್ಪಿದ್ದಾಳೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮಾಪುರ ಎಂಬ ಗ್ರಾಮದಲ್ಲಿ ಈ ಒಂದು ದುರಂತ ನಡೆದಿದೆ. ಪೋಷಕರ ಜೊತೆಗೆ ಬಾಲಕಿ ಸಂಬಂಧಿಕರ ವಿವಾಹಕ್ಕೆ ಹೋಗಿದ್ದಳು. ಮದುವೆಯ ಮನೆಯಲ್ಲಿ ಬಾಲಕಿಯ ಮೇಲೆ ಬಿಸಿ ಸಾಂಬಾರ್ ಬಿದ್ದಿದೆ. ತಕ್ಷಣ ಬಾಲಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನದ ಹಿಂದೆ ಅಷ್ಟೇ ಬಾಲಕಿಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಇಂದು ಮತ್ತೆ ಬಾಲಕೀಯ ಮೈ ಮೇಲೆ ಗುಳ್ಳೆಗಳು ಆಗಿದ್ದವು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.