ಬೆಂಗಳೂರು : ಬೆಂಗಳೂರಿನಲ್ಲಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.ಉಮೇಶ್, ತಬ್ರೇಜ್, ಜಬೀರ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ಆರು ಓಮ್ನಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಈ ಹಿಂದೆ ಈ ಗ್ಯಾಂಗ್ ಟ್ರ್ಯಾಕ್ಟರ್ ಗಳನ್ನು ಕದ್ದು ಮಾರುತ್ತಿದ್ದರು. 2020 ರಲ್ಲಿ ಟ್ರ್ಯಾಕ್ಟರ್ ಕೇಸ್ ನಲ್ಲಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದರು. ಟ್ರ್ಯಾಕ್ಟರ್ ಕಳ್ಳತನ ಕೇಸ್ ನಲ್ಲಿ ಮೂವರು ಜೈಲಿಗೆ ಹೋಗಿ ಬಂದಿದ್ದರು. ನಂತರ ಓಮ್ನಿ ಕಾರುಗಳನ್ನು ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು.