ಶಿವಮೊಗ್ಗ: ಜಿಲ್ಲೆಯಲ್ಲಿ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಜೊತೆಗೆ ಚಳಿಗಾಳಿ ಬೀಸುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸೊರಬ ತಾಲ್ಲೂಕಿನ ಉಳವಿ ಪ್ರೌಢ ಶಾಲೆಗೆ ರಜೆ ಘೋಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಳವಿ ಪ್ರೌಢಶಾಲೆಗೆ ಇಂದು ರಜೆಯನ್ನು ಘೋಷಿಸಿರುವುದಾಗಿ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಅವರು, ಸೊರಬ ತಾಲ್ಲೂಕಿನಲ್ಲಿ ಉಳವಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಾಹಿತಿಯನ್ನು ತಹಶೀಲ್ದಾರ್ ಮಂಜಳಾ ಅವರಿಗೆ ನೀಡಲಾಗಿದೆ. ಅವರೊಂದಿಗೆ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚಿಸಿ ಇಂದು ಉಳವಿಯ ಪ್ರೌಢಶಾಲೆಗೆ ರಜೆ ನೀಡಲಾಗಿದೆ ಎಂದಿದ್ದಾರೆ.
ಇಂದು ಶಾಲೆಗೆ ರಜೆಯ ಕಾರಣ ಮುಂದಿನ ಅವದಿಯಲ್ಲಿ ಇಂದಿನ ತರಗತಿ ಪಠ್ಯ ಸರಿದೂಗಿಸುವುದಾಗಿ ಮಾಹಿತಿ ನೀಡಿದ್ದಾರೆ.
ವಸಂತ ಬಿ ಈಶ್ವರಗೆರೆ, ಸಂಪಾದಕರು, kannadanewsnow.com – 9738123234