ಬೆಂಗಳೂರು : ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಒಪಿಎಸ್ ಪ್ರಸ್ತಾವನೆ ಪರಿಶೀಲಿಸಲು ರಾಜ್ಯ ಸರ್ಕಾರವು 3 ತಂಡ ರಚನೆ ಮಾಡಿ ಆದೇಶ ಹೊರಡಿಸಿದೆ.
ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ಈ ಕೆಳಕಂಡ ಅಧಿಕಾರಿ/ನೌಕರರನ್ನೊಳಗೊಂಡಂತೆ ಮೂರು ತಂಡಗಳಾಗಿ ರಚಿಸಿ ಕಾರ್ಯ ಹಂಚಿಕೆ ಮಾಡಿದೆ ಹಾಗೂ ಸದರಿ ಅಧಿಕಾರಿ / ನೌಕರರು ಪ್ರತಿ ದಿನ ಅಪರಾಹ್ನ ಕಡ್ಡಾಯವಾಗಿ ಹಾಜರಾಗಿ ದಿನಾಂಕ:24.1.2024ರ ಆದೇಶದನ್ವಯ ಒಪಿಎಸ್ಗೆ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ಆದೇಶಿಸಿದೆ.