Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಓಲಾ ಸಿಇಒ ಭವಿಶ್ ಅಗರ್ವಾಲ್ ವಿರುದ್ಧ ವಾರಂಟ್ ಹೊರಡಿಸಿದ ಗೋವಾ ಗ್ರಾಹಕ ಆಯೋಗ !

18/02/2026 6:46 AM

BIG NEWS : ಪೊಲೀಸರು `ಪೋಕ್ಸೋ ಕೇಸ್’ ಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸಗಳ ಗೌಪತ್ಯೆ ಕಾಪಾಡುವುದು ಕಡ್ಡಾಯ !

18/02/2026 6:46 AM

BREAKING: ಓಲಾ ಸಿಇಒ ಭವಿಶ್ ಅಗರ್ವಾಲ್ ವಿರುದ್ಧ ಬಂಧನ ವಾರಂಟ್ ಜಾರಿ | Ola CEO Bhavish Aggarwal

17/02/2026 10:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ: SM ಕೃಷ್ಣ ಕನಸು ನನಸು ಮಾಡಲು ಅವಿರತ ಶ್ರಮ: ಶಾಸಕ ಕೆ.ಎಂ.ಉದಯ್
KARNATAKA

ಮಂಡ್ಯ: SM ಕೃಷ್ಣ ಕನಸು ನನಸು ಮಾಡಲು ಅವಿರತ ಶ್ರಮ: ಶಾಸಕ ಕೆ.ಎಂ.ಉದಯ್

By kannadanewsnow0930/05/2025 8:42 PM

ಮಂಡ್ಯ : ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭ ಮಾಡಲು ರೂಪುರೇಷೆಯ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಹೇಳಿದರು.

ಮದ್ದೂರು ತಾಲೂಕಿನ ಕದಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮೂಲಕ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಬೇಕೆಂಬುದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮಹದಾಸೆಯಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ಅದು ಈಡೇರಲಿಲ್ಲ. ಹೀಗಾಗಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬೇಡ ಸರ್ಕಾರಿ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಿದ ಹಲವರು ಇಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಹಾಗೂ ಮಹಾನ್ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹಳ ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇಷ್ಟೊಂದು ಸೌಲಭ್ಯಗಳು ಇರಲಿಲ್ಲ ಅದರೆ, ಇಂದು ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವುದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿದ್ದು, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕೆಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೆಚ್ಚುವರಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಶಿಥಿಲಗೊಂಡ ಕೊಠಡಿಗಳ ರಿಪೇರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರಕ್ಕೆ ಒತ್ತಡ ತಂದು ಪ್ರಾಥಮಿಕ ಪಾಠಶಾಲೆಗೆ 126 ಹಾಗೂ ಪ್ರೌಢಶಾಲೆಗೆ 85 ಅತಿಥಿ ಶಿಕ್ಷಕರನ್ನು ನೇವಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಬುಕ್ ಮತ್ತು ಜಾಮಿಟ್ರಿ ಬಾಕ್ಸ್ ಗಳನ್ನು ಉಚಿತವಾಗಿ ಜೂನ್ 10 ರಂದು ಏಕ ಕಾಲಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯುಳ್ಳ ಪೋಸ್ಟರ್ ಅನ್ನು ಇದೇ ವೇಳೆ ಬಿಡುಗಡೆಗೊಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಸಕ ಕೆ.ಎಂ.ಉದಯ್ ಅವರನ್ನು ವಿಧ್ಯಾರ್ಥಿಗಳು ಪೂರ್ಣ ಕುಂಭ ಸ್ವಾಗತದೊಂದಿಗೆ ಶಾಲೆಗೆ ಕರೆತರಲಾಯಿತು.

ಇದೇ ವೇಳೆ ಮನ್ ಮುಲ್ ಮಾಜಿ ಅಧ್ಯಕ್ಷ ರಾಮಕೃಷ್ಣ, ಬಿಇಓ ಧನಂಜಯ, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಪರಮಶಿವಯ್ಯ, ಮಹದೇವು, ಪುಟ್ಟಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವೀಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವ ಪ್ರಸಾದ್, ಎಸ್ಡಿಎಂಸಿ ಅಧ್ಯಕ್ಷ ಮಹೇಶ್, ಮುಖ್ಯ ಶಿಕ್ಷಕರಾದ ಜೋಗಿಗೌಡ, ನಾಗರತ್ನ ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BREAKING: ಇನ್ಮುಂದೆ SARI ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ | Corona Test

BREAKING : ಮಂಗಳೂರಿನಲ್ಲಿ ಮಳೆಗೆ ಮತ್ತೊಂದು ದುರಂತ : ಸಮುದ್ರದಲ್ಲಿ ನಾಡ ದೋಣಿ ಮುಗುಚಿ ಇಬ್ಬರು ನೀರುಪಾಲು!

Share. Facebook Twitter LinkedIn WhatsApp Email

Related Posts

BIG NEWS : ಪೊಲೀಸರು `ಪೋಕ್ಸೋ ಕೇಸ್’ ಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸಗಳ ಗೌಪತ್ಯೆ ಕಾಪಾಡುವುದು ಕಡ್ಡಾಯ !

18/02/2026 6:46 AM2 Mins Read

BREAKING NEWS: ಕರ್ನಾಟಕದ ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ‘ರಂಜಾನ್ ಉಪವಾಸ’ ಆರಂಭ | Ramadan 2026

17/02/2026 10:04 PM1 Min Read

BIG NEWS : ಕೆಂಪೇಗೌಡ ಏರ್ಪೋರ್ಟ್ ಗೆ ಬಂದ ಕಾಂಗ್ರೆಸ್ ಶಾಸಕರು : ಫಾರೆನ್ ಟೂರ್ ಗೆ ಹೋಗೋದು ಯಾರ್ಯಾರು?

17/02/2026 9:26 PM1 Min Read
Recent News

ಓಲಾ ಸಿಇಒ ಭವಿಶ್ ಅಗರ್ವಾಲ್ ವಿರುದ್ಧ ವಾರಂಟ್ ಹೊರಡಿಸಿದ ಗೋವಾ ಗ್ರಾಹಕ ಆಯೋಗ !

18/02/2026 6:46 AM

BIG NEWS : ಪೊಲೀಸರು `ಪೋಕ್ಸೋ ಕೇಸ್’ ಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸಗಳ ಗೌಪತ್ಯೆ ಕಾಪಾಡುವುದು ಕಡ್ಡಾಯ !

18/02/2026 6:46 AM

BREAKING: ಓಲಾ ಸಿಇಒ ಭವಿಶ್ ಅಗರ್ವಾಲ್ ವಿರುದ್ಧ ಬಂಧನ ವಾರಂಟ್ ಜಾರಿ | Ola CEO Bhavish Aggarwal

17/02/2026 10:10 PM

BREAKING NEWS: ಕರ್ನಾಟಕದ ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ‘ರಂಜಾನ್ ಉಪವಾಸ’ ಆರಂಭ | Ramadan 2026

17/02/2026 10:04 PM
State News
KARNATAKA

BIG NEWS : ಪೊಲೀಸರು `ಪೋಕ್ಸೋ ಕೇಸ್’ ಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸಗಳ ಗೌಪತ್ಯೆ ಕಾಪಾಡುವುದು ಕಡ್ಡಾಯ !

By kannadanewsnow5718/02/2026 6:46 AM KARNATAKA 2 Mins Read

ಬೆಂಗಳೂರು : ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ಪೊಲೀಸರು…

BREAKING NEWS: ಕರ್ನಾಟಕದ ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ‘ರಂಜಾನ್ ಉಪವಾಸ’ ಆರಂಭ | Ramadan 2026

17/02/2026 10:04 PM

BIG NEWS : ಕೆಂಪೇಗೌಡ ಏರ್ಪೋರ್ಟ್ ಗೆ ಬಂದ ಕಾಂಗ್ರೆಸ್ ಶಾಸಕರು : ಫಾರೆನ್ ಟೂರ್ ಗೆ ಹೋಗೋದು ಯಾರ್ಯಾರು?

17/02/2026 9:26 PM

ಸಾಗರದ ಯಡಮನೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರಿಂದಲೇ ರೈತರಿಗೆ ದ್ರೋಹ: ಮಲ್ಲಿಕಾರ್ಜುನ ಹಕ್ರೆ ವಾಗ್ಧಾಳಿ

17/02/2026 9:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.