ಬೆಂಗಳೂರು: ಜೂನ್.1ರಿಂದ ವಿಧಾನಸೌಧದ ಒಳಗೆ ಪ್ರವೇಶಿಸುವಂತ ಸಾರ್ವಜನಿಕರಿಗೆ ಶುಲ್ಕ ಫಿಕ್ಸ್ ಆಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಧಾನಸೌಧ ಗೈಡೆಡ್ ವಾಕಿಂಗ್ ಟೂರ್ ಶುಲ್ಕವನ್ನು ಪ್ರಕಟಿಸಲಾಗಿದೆ.
ಹೌದು. ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎನ್ನುವಂತೆ ವಿಧಾನಸೌಧ ಹಾಗೂ ವಿಧಾನಸಭೆಯ ಸಭಾಂಗಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಸಂಬಂಧ ನಾಳೆ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್ ಗೆ ಚಾಲನೆ ನೀಡಲಾಗುತ್ತಿದೆ.
ಜೂನ್.1ರಿಂದ ಸಾರ್ವಜನಿಕರಿಗೆ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. ಆದರೇ ಇದಕ್ಕಾಗಿ ಸಾರ್ವಜನಿಕರು ಶುಲ್ಕವನ್ನು ನೀಡಿ ಹೋಗಬೇಕಾಗಿದೆ.
ವಿಧಾನಸೌಧ ನೋಡೋದಕ್ಕೆ ಎಷ್ಟು ಶುಲ್ಕ ನಿಗದಿ?
ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕೆ ಎಸ್ ಟಿ ಡಿ ಸಿ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ವಿಧಾನಸೌಧ ಟೂರ್ ಗೈಡ್ ಗೆ ವಯಸ್ಕರಿಗೆ ರೂ.50, 16 ವರ್ಷ ಮೇಲ್ಪಟ್ಟವರಿಗೆ ರೂ.50, 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಾಗಿದೆ.
ಇನ್ನೂ ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರದಂದು ವಿಧಾನಸೌಧ ಟೂರ್ ವ್ಯವಸ್ಥೆ ಇರಲಿದ್ದು, ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರವೇ ವಿಧಾನಸೌಧ ಟೂರ್ ಗೈಡ್ ಗೆ ಅವಕಾಶವಿದೆ. ವಿಧಾನಸೌಧದ ಗೇಟ್ ನಂ.3ನಲ್ಲಿ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ.
ಅಂದಹಾಗೇ 30 ಜನರನ್ನು ಒಳಗೊಂಡ ಗ್ರೂಪ್ ಅನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗಿದೆ. ಒಂದು ಗ್ರೂಪ್ ಗೆ 90 ನಿಮಿಷಗಳ ಪ್ರವಾಸದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದ್ದು, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.
BIG NEWS: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮೂವರು ಆತ್ಮಹತ್ಯೆ
BREAKING: ರಾಜ್ಯದಲ್ಲಿ ಉಸಿರಾಟದ ತೊಂದರೆ, SARI ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ | Covid19 Test