ವಿಜಯನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಯೋಜನೆ ಮಾಡಲಾಗಿದೆ. ಈ ಒಂದು ಸಾಧನಾ ಸಮಾವೇಶದಲ್ಲಿ ಖರ್ಗೆ ಪಹಲ್ಗಾಮ್ ಘಟನೆ ಕುರಿತು ಮಾತನಾಡಿ ಮೋದಿ ಸರ್ಕಾರ ಭದ್ರತೆ ಕೊಡದಿದ್ದಕ್ಕೆ ಅಲ್ಲಿ 26 ಜನರ ಅಮಾಯಕರ ಕೊಲೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 17ರಂದು ಕಾಶ್ಮೀರಕ್ಕೆ ಹೋಗುವವರಿದ್ರು. ಆದರೆ ಬೇಹುಗಾರಿಕೆ, ಗುಪ್ತಚರ ದಳದವರು ಹೋಗಬೇಡಿ ಎಂದಿದ್ದರು. ಅದೇ ಕಾರಣಕ್ಕೆ ಮೋದಿ ಕಾಶ್ಮೀರ ಪ್ರವಾಸ ರದ್ದು ಮಾಡಿಸಿದ್ರು. ಇದೆಲ್ಲಾ ಮೋದಿಗೆ ಗೊತ್ತಿತ್ತು, ಹಾಗಿದ್ದರೂ ಯಾಕೆ ಹೇಳಲಿಲ್ಲ. ಮೋದಿ ಅಂದೇ ಹೇಳಿದ್ದರೆ 26 ಪ್ರಾಣ ಉಳಿಯುತ್ತಿದ್ದವು ಎಂದು ಹೇಳಿದರು.
ಆದರೆ ಈ ವೇಳೆ ಸರ್ಕಾರ, ಮಿಲಿಟರಿ ಯಾರೂ ಜನರಿಗೆ ಸಹಕಾರ ಕೊಟ್ಟಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ. ಪಾಕಿಸ್ತಾನದ ಕೆಲಸ ಯಾವಾಗಲೂ ನಮ್ಮ ದೇಶದ ಮೇಲೆ ಗೂಬೆ ಕೂಡಿಸೋದು. ಪಾಕಿಸ್ತಾನಕ್ಕೆ ಶಕ್ತಿ ಇಲ್ಲ. ಹೀಗಾಗಿ ಭಯೋತ್ಪಾದಕರಿಂದ ದಾಳಿ ಮಾಡಿಸುತ್ತಿದೆ. ನಾವು ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ನಾವೆಲ್ಲಾ ನಿಂತು ಕೆಲಸ ಮಾಡೋಣ ಎಂದು ಹೇಳಿದ್ದೆ.