ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ವೇಳೆ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ಕೂಡ ಭಾರತ ದಾಳಿ ಮಾಡಿದೆ. ಅದರಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಕೂಡ ಒಂದು.
ಆದರೆ ಭಾರತ ಅಣ್ವಸ್ತ್ರ ಗೋದಾಮಿನ ಮೇಲೆ ದಾಳಿ ಮಾಡಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು. ಇದೀಗ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಸಾಕ್ಷಿ ಸಮೇತ ಸ್ಪಷ್ಟನೆ ನೀಡಿದ್ದು ಪರಮಾಣು ಗೋದಾಮಿಗೆ ಯಾವುದೇ ರೀತಿಯಾಗಿ ಹಾನಿಯಾಗಿಲ್ಲ ಎಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಅಣ್ವಸ್ತ್ರ ಗೋದಾಮಿಗೆ ಯಾವುದೇ ರೀತಿಯಾಗಿ ಹಾನಿ ಆಗಿಲ್ಲ ಪಾಕಿಸ್ತಾನದ ಕಿರಾನಾ ಬೆಟ್ಟಕ್ಕೆ ಯಾವುದೇ ಹಾನಿಯಾಗಿಲ್ಲ ಅನ್ನೋದಕ್ಕೆ ಇದೀಗ ಸಾಕ್ಷಿ ದೊರಕಿದೆ.
ಕಿರಾನಾ ಬೆಟ್ಟದಲ್ಲಿ ಪರಮಾಣು ವಿಕಿರಣ ಸೋರಿಕೆ ಆಗಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮಾಹಿತಿ ನೀಡಿದೆ. ಪಾಕಿಸ್ತಾನದ ಸರ್ಗೋಧ ವಾಯು ನೆಲೆಯ ಮೇಲೆ ದಾಳಿಯಾಗಿದೆ. ಆದರೆ ಪಾಕಿಸ್ತಾನದಲ್ಲಿ ಇರುವ ಅಣ್ವಸ್ತ್ರ ಗೋದಾಮಿಗೆ ಯಾವುದೇ ರೀತಿಯಾಗಿ ಹಾನಿಯಾಗಿಲ್ಲ ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ.
ಜನರಿಗೆ ಯಾವುದೇ ರೀತಿಯಾಗಿ ಸಮಸ್ಯೆ ಆಗಿಲ್ಲ ಬಹು ಮುಖ್ಯವಾಗಿ ಪಾಕಿಸ್ತಾನ ಅನ್ನುವಸ್ತ್ರಗಳನ್ನು ಎಲ್ಲಿ ಇಟ್ಟಿದೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಈ ಒಂದು ಮಾಹಿತಿಯ ಮೂಲಕ ಪಾಕಿಸ್ತಾನ ಅಣ್ವಸ್ತ್ರಗಳನ್ನು ಪಾಕಿಸ್ತಾನ ಈ ಒಂದು ಕಿರಾನಾ ಬೆಟ್ಟದಲ್ಲಿ ಇಟ್ಟಿದೆ ಎಂದು ಗೊತ್ತಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.