ಇಸ್ಲಾಮಾಬಾದ್ : ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ, 26 ಅಮಾಯಕ ರನ್ನು ಬಲಿಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರು.
ಇದೀಗ ಧ್ವಂಸವಾಗಿರೋ ಉಗ್ರರ ಅಡಗುತಾಣಗಳನ್ನು ಮತ್ತೆ ಕಟ್ಟಲು ಪಾಕಿಸ್ತಾನ್ ಹೆಚ್ಚಿಸುತ್ತಿದೆ ಎಂದು ತಿಳಿದು ಬಂದಿದೆ. ಭಯೋತ್ಪಾದಾಕರ ಬೆಂಬಲಕ್ಕೆ ಪಾಕಿಸ್ತಾನ ಸರಕಾರ ಇದೀಗ ನಿಂತಿದೆ. ಉಗ್ರರ ನೆಲೆಗಳು ಮತ್ತು ಉಗ್ರರ ಸಂಬಂಧಿಕರ ಮನೆಗಳನ್ನು ಪುನಃ ಕಟ್ಟಲು ಪಾಕಿಸ್ತಾನ ಯತ್ನಿಸುತ್ತಿದ್ದೆ. ಈಗಾಗಲೇ ಭಾರತ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ 11 ವಾಯು ನೆಲೆಗಳು ಸೇರಿದಂತೆ ಒಟ್ಟು ನೂರಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದೆ.