ನವದೆಹಲಿ : ಭಾರತದ ಗಡಿ ಯುದ್ದಕ್ಕೂ ಪಾಕಿಸ್ತಾನ ಶೆಲ್ ದಾಳಿ ಮುಂದುವರಿಸಿದ್ದು ಇದೀಗ ಭಾರತ ಕೂಡ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೇಲೆ ಭಾರತವು 5 ಡೋನ್ ಗಳ ಮೂಲಕ ಮತ್ತೆ ದಾಳಿ ಮುಂದುವರಿಸಿದೆ.
ಹೌದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೇಲೆ ಐದು ಡ್ರೋನ್ ಗಳಿಂದ ಭಾರತದ ದಾಳಿ ಮಾಡಿದೆ. ಓಕಾರಾ ಕ್ಯಾಂಟ್ ಮೇಲೆ ಡ್ರೋನ್ ಮೂಲಕ ಭಾರತದ ಮೇಲೆ ಇದೀಗ ಭಾರತ ದಾಳಿಯನ್ನು ಮುಂದುವರೆಸಿದೆ.
ಇನ್ನು ಪಾಕಿಸ್ತಾನ ಕೂಡ ಭಾರತದ ಮೇಲೆ ಡ್ರೋನ್ ದಾಳಿ ನಡೆಸಿದ್ದು ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕಿಸ್ತಾನದ ಡ್ರೋನ್ ಅನ್ನು ಭಾರತ ಹೊಡೆದುರುಳಿಸಿದೆ. ಭಾರತದ ಮೇಲೆ ಪಾಕಿಸ್ತಾನ ಮತ್ತೆ ದಾಳಿ ನಡೆಸುತ್ತಿದ್ದು, ಮುಂಜಾನೆ 4 ಗಂಟೆಗೆ ದಾಳಿಗೆ ಯತ್ನಿಸಿದೆ.ಆದರೆ ಭಾರತ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದೆ.