ಜಮ್ಮು ಕಾಶ್ಮೀರ : ಪಾಕಿಸ್ತಾನದ ಮೇಲೆ ಭಾರತ ಈಗಾಗಲೇ ಭಾರಿ ದಾಳಿ ನಡೆಸಿದ್ದು, ಇಷ್ಟಾದರೂ ಸಹ ಬುದ್ಧಿ ಕಲಿಯದ ಪಾಕಿಸ್ತಾನ ಜಮ್ಮು ಕಾಶ್ಮೀರದ ಉರಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದೆ. ಈ ಒಂದು ಗುಂಡಿನ ದಾಳಿಯಲ್ಲಿ ಭಾರತ ಮೂಲದ ಮಹಿಳೆ ಒಬ್ಬರು ಸಾವನಪ್ಪಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹೌದು ಜಮ್ಮು ಕಾಶ್ಮೀರದ ಉರಿಯಲ್ಲಿ ಪಾಕಿಸ್ತಾನ ಫೈರಿಂಗ್ ನಡೆಸಿದೆ. ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಮಹಿಳೆ ಸಾವನಪ್ಪಿದ್ದಾಳೆ. ಪಾಕಿಸ್ತಾನ ಫೈರಿಂಗ್ ನಲ್ಲಿ ಭಾರತ ಮೂಲದ ಮಹಿಳೆ ಇದೀಗ ಸಾವನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾರಾಮುಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ.