ನವದೆಹಲಿ: ಭಾರತೀಯ ಸೇನೆ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಮುಂದುವರೆಯಲಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಹಲವು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಒಬ್ಬನೇ ಒಬ್ಬ ನಾಗರಿಕ ಮೃತಪಟ್ಟಿಲ್ಲ. ಸೇನೆ ನಿಖರವಾದ ಮತ್ತು ಊಹಿಸಲು ಅಸಾಧ್ಯವಾದ ಕೆಲಸವನ್ನು ಮಾಡಿದೆ. ಭಾರತದ ತಾಳ್ಮೆಯನ್ನು ಪರೀಕ್ಷಿಸಬೇಡಿ, ಮತ್ತಷ್ಟು ದಾಳಿಗೆ ಭಾರತೀಯ ಸೇನೆ ಸಿದ್ಧವಿದೆ. ಭಾರತೀಯ ಸೇನೆಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತಾಗಿದೆ. ಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಹೆಮ್ಮೆಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂ ನಾವು ಭಾರತೀಯ ರಕ್ಷಣಾ ಉದ್ಯಮವನ್ನು ಬಲವಾದ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಮಾಡಬೇಕಾಗಿದೆ. ಇಂದು, ನಾನು ನಿಮಗೆ ಒಂದು ಪ್ರಮುಖ ಮನವಿಯನ್ನು ಮಾಡಲು ಬಂದಿದ್ದೇನೆ. ಈ ಮನವಿಯು ಪ್ರಬಲವಾದ ವಿಶ್ವ ನಾಯಕ ಮತ್ತು ಅತ್ಯಾಧುನಿಕ ಬ್ರ್ಯಾಂಡ್ ಭಾರತವನ್ನು ನಿರ್ಮಿಸುವುದು. ಆದ್ದರಿಂದ ದೇಶಗಳು ವಿಶ್ವದ ರಕ್ಷಣಾ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬಗ್ಗೆ ಸಂದೇಹಗಳನ್ನು ಹೊಂದಿರುವಾಗ, ಅವರು ಬ್ರಾಂಡ್ ಇಂಡಿಯಾವನ್ನು ಆಯ್ಕೆ ಮಾಡುತ್ತಾರೆ. ಸಂದೇಹ ಬಂದಾಗಲೆಲ್ಲಾ, ಭಾರತಕ್ಕೆ ಹೋಗಿ, ಇದು ನಮ್ಮ USP ಆಗಿರಬೇಕು” ಎಂದು ಹೇಳಿದರು.
#WATCH | Delhi: At the National Quality Conclave, Defence Minister Rajnath Singh says, "…We have to make the Indian Defence industry a strong and trusted brand. Today, I have come to make an important appeal to you. This appeal is to build a strong world leading and state of… pic.twitter.com/J0asEEB8i2
— ANI (@ANI) May 8, 2025