ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಚಮನ್ಗಂಜ್ ಪ್ರದೇಶದ ಐದು ಅಂತಸ್ತಿನ ಕಟ್ಟಡದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 45 ವರ್ಷದ ವ್ಯಕ್ತಿ ಮತ್ತು ಅವರ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಅಂತಸ್ತಿನ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಶೂ ತಯಾರಿಕಾ ಕಾರ್ಖಾನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೇಮ್ ನಗರ ಪ್ರದೇಶದ ಇಡೀ ಕಟ್ಟಡವನ್ನು ಹೊಗೆ ಆವರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮೃತ ದಂಪತಿಯನ್ನು ಮೊಹಮ್ಮದ್ ದಾನಿಶ್ ಮತ್ತು ಅವರ ಪತ್ನಿ ನಜ್ನೀನ್ ಸಾಬಾ (42) ಎಂದು ಗುರುತಿಸಲಾಗಿದ್ದು, ಅವರ ಶವಗಳನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ದಂಪತಿಯ ಮೂವರು ಪುತ್ರಿಯರಾದ 15 ವರ್ಷದ ಸಾರಾ, 12 ವರ್ಷದ ಸಿಮ್ರಾ ಮತ್ತು 7 ವರ್ಷದ ಇನಾಯಾ ಮೃತ ದುರ್ದೈವಿಗಳು