Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

30/04/2026 12:36 PM

BREAKING : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು!

30/04/2026 12:33 PM

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಮೃತರ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಿಸಿದ ಜೆಡಿಎಸ್

30/04/2026 12:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇರಳದ ಕನ್ನಡಿಗರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಸಿದ್ಧ: ಸಚಿವ ಚಲುವರಾಯಸ್ವಾಮಿ
KARNATAKA

ಕೇರಳದ ಕನ್ನಡಿಗರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಸಿದ್ಧ: ಸಚಿವ ಚಲುವರಾಯಸ್ವಾಮಿ

By kannadanewsnow0903/05/2025 7:47 PM

ಕಾಸರಗೋಡು : ಕಾಸರಗೋಡು ಜಿಲ್ಲೆ ಆಡಳಿತದ ದೃಷ್ಟಿಯಿಂದ ಕೇರಳ ರಾಜ್ಯಕ್ಕೆ ಒಳಪಟ್ಟರೂ ಸಹ ನಮ್ಮ ರಾಜ್ಯದ ಕನ್ನಡಿಗರ ಮನಸ್ಸು, ಹೃದಯದಲ್ಲಿ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡಿಗರ ಹಾಗೂ ಕನ್ನಡ ಪತ್ರಕರ್ತರ ಕ್ಷೇಯೋಭಿವೃದ್ದಿಗೆ ಸದಾ ರಾಜ್ಯ ಸರ್ಕಾರ ಬದ್ಧವಾಗಿರುತ್ತದೆ‌ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.

ಶನಿವಾರದಂದು ಇಲ್ಲಿನ ಸೀತಾಂಗೋಳಿಯಲ್ಲಿ ನಡೆದ ಕೆ.ಯು.ಡಬ್ಲೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಯಾವಾಗಲೂ ಗಡಿನಾಡು ಕನ್ನಡಿಗರ ಹಾಗೂ ಪತ್ರಕರ್ತರ ಹಿತ ಕಾಪಾಡಲು ಸಿದ್ದವಾಗಿದೆ. ಗಡಿ ಪ್ರದೇಶದ ಕನ್ನಡಿಗರ ರಕ್ಷಣೆ, ಅಭಿವೃದ್ಧಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಲು ಆದ್ಯತೆ ನೀಡಲಾಗುವುದು ಎಂದರು.

ಕಾಸರಗೋಡಿನ ಪತ್ರಕರ್ತರು ಸೇರಿದಂತೆ ಕನ್ನಡಿಗರ ಯಾವುದೇ ನೆರವು ಬೇಕಾಗಿದ್ದಲ್ಲಿ ತಕ್ಷಣವೇ ಒದಗಿಸುವ ಕೆಲಸ ಸರ್ಕಾರ ಮಾಡ್ತಾ ಇದ್ದು, ಹಂತ ಹಂತವಾಗಿ ಅನುದಾನವನ್ನು ಸಹ ಸರ್ಕಾರದಿಂದ ನೀಡಲಾಗುವುದು ಎಂದರು.

ನಮ್ಮ ರಾಜ್ಯ ಸೇರಿದಂತೆ ಬೇರೆ, ಬೇರೆ ರಾಜ್ಯಗಳ ಕನ್ನಡಿಗ ಪತ್ರಕರ್ತರನ್ನು ಒಗ್ಗೂಡಿಸುವ ಕೆಲಸವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾಡುತ್ತಾ ಇದ್ದು, ಅವರ ಪರಿಶ್ರಮದಿಂದ ಕಾಸರಗೋಡಿನಲ್ಲಿ ಕನ್ನಡ ಪತ್ರಕರ್ತರ ಘಟಕ, ಅತ್ಯತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಕಾಸರಗೋಡು ಪತ್ರಕರ್ತರಿಗೆ ಗುರುತಿನಚೀಟಿ ವಿತರಿಸಿ ಮಾತನಾಡಿದ ಶಿವಾನಂದ ತಗಡೂರು ಅವರು, ಕೆಯುಡಬ್ಲ್ಯೂಜೆ ಘಟಕ ಕಾಸರಗೋಡಿನಲ್ಲಿ ಅಸ್ಥಿತ್ವಕ್ಕೆ ಬಂದ ಮೇಲೆ ವರ್ಷದಿಂದ ವರ್ಷಕ್ಕೆ ಹತ್ತು ಹಲವಾರು ಕಾರ್ಯಕ್ರಮವನ್ನು ಕ್ರೀಯಾತ್ಮಕವಾಗಿ ಮಾಡುತ್ತಿದೆ ಎಂದು ಪ್ರಶಂಸಿಸಿದರು.

ಕಾಸರಗೋಡು ಪತ್ರಕರ್ತರ ಆಶೋತ್ತರಗಳಿಗೆ ಕೆಯುಡಬ್ಲ್ಯೂಜೆಸ್ಪಂದಿಸುತ್ತಾ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಸಹಕಾರದಿಂದ 25 ಲಕ್ಷ ರೂ ಅನುದಾನ ಕೊಡಿಸಲಾಗಿದೆ. ನೆರವು ನೀಡಿದ ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.

ಕಾಸರಗೋಡು ಜಿಲ್ಲೆಯಲ್ಲಿ ಇಂದಿಗೂ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುತ್ತಿದ್ದು, ಕನ್ನಡ ಪತ್ರಕರ್ತರು ಶ್ರಮಿಸುತ್ತಿದ್ದು, ಇಂತಹ ಕಾರ್ಯಕ್ರಮಗಳು ಇತರೆ ಗಡಿನಾಡು ಕನ್ನಡಿಗರಿಗೆ ಮಾದರಿಯಾಗಿದೆ ಎಂದರು.

ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ನಾವೆಲ್ಲ ಕೇರಳದಲ್ಲಿದ್ದರೂ ಕನ್ನಡಾಭಿಮಾನಿಗಳಾಗಿದ್ದೇವೆ. ಗಡಿಯಲ್ಲಿನಕನ್ನಡ ಉಳಿಸಿ ಬೆಳೆಸಲು ಕಂಕಣಬದ್ದರಾಗಿದ್ದೇವೆ ಎಂದರು.

ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ಮಂಡ್ಯದ ಮತ್ತಿಕೇರಿ ಜಯರಾಮ್, ಶಿವಮೊಗ್ಗದ ಎನ್.ರವಿಕುಮಾರ್, ಕೊಪ್ಪಳದ ನಾಗರಾಜ್. ವೈ, ಬೆಳಗಾಂನ
ಮಲ್ಲಿಕಾರ್ಜುನ ರೆಡ್ಡಿ ಗೋಂದಿ, ಮಂಗಳೂರಿನ ವೇಣು ವಿನೋಧ, ಸತ್ಯವತಿ ಸೇರಿದಂತೆ ಒಟ್ಟು 21 ಜನ ಪತ್ರಕರ್ತರಿಗೆ, ಸಾಧಕರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಕೃಷಿ ಸಚಿವರಾದ‌ ಎನ್.ಚೆಲುವರಾಯಸ್ವಾಮಿ ಪ್ರದಾನ ಮಾಡಿದರು.

ತುಮಕೂರಿನಲ್ಲಿ ರಾಜ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದ ಅಲ್ಲಿನ ಜಿಲ್ಲಾಧ್ಯಕ್ಷ ಚೀ.ನಿ.ಪುರುಷೋತ್ತಮ ಮತ್ತು ಪ್ರಧಾನ ಕಾರ್ಯದರ್ಶಿ ರಘುರಾಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ಸಾನಿಧ್ಯವನ್ನು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ವಹಿಸಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಾಶಿವಶೆಟ್ಟಿ ಕೂಳೂರು, ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಶೋಭಾ ಯಾತ್ರೆ ನಡೆಯಿತು. ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಉಂಡ ಮನೆಗೆ ಎರಡು ಬಗೆಯುವ ಸೋನು ನಿಗಮ್ ವರ್ತನೆ ಖಂಡನೀಯ: ಚಿತ್ರ ಸಾಹಿತಿ ಕವಿರಾಜ್ ಕಿಡಿ

BIG NEWS: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ: ಗೃಹ ಸಚಿವ ಡಾ.ಜಿ ಪರಮೇಶ್ವರ್

Share. Facebook Twitter LinkedIn WhatsApp Email

Related Posts

BREAKING : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು!

30/04/2026 12:33 PM1 Min Read

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಮೃತರ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಿಸಿದ ಜೆಡಿಎಸ್

30/04/2026 12:19 PM1 Min Read

BREAKING : `UGC-NET’ ಪರೀಕ್ಷೆಗೆ ನೋಂದಣಿ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ | UGC NET Exam 2026

30/04/2026 12:06 PM1 Min Read
Recent News

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

30/04/2026 12:36 PM

BREAKING : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು!

30/04/2026 12:33 PM

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಮೃತರ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಿಸಿದ ಜೆಡಿಎಸ್

30/04/2026 12:19 PM

Viral : ಅಚ್ಚರಿಯಾದರೂ ಸತ್ಯ : ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆಗೆ ಮದುವೆಯಾದ 66ರ ವೃದ್ಧ.!

30/04/2026 12:13 PM
State News
KARNATAKA

BREAKING : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು!

By kannadanewsnow0530/04/2026 12:33 PM KARNATAKA 1 Min Read

ಬೆಂಗಳೂರು : ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದುಬಿದ್ದು 7 ಜನ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಘಟನಾ ಸ್ಥಳಕ್ಕೆ ಲೋಕಾಯುಕ್ತ…

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಮೃತರ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಿಸಿದ ಜೆಡಿಎಸ್

30/04/2026 12:19 PM

BREAKING : `UGC-NET’ ಪರೀಕ್ಷೆಗೆ ನೋಂದಣಿ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ | UGC NET Exam 2026

30/04/2026 12:06 PM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಪೊಲೀಸರಿಗೆ ಶರಣಾದ ಪತಿ!

30/04/2026 12:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.