ಬೆಂಗಳೂರು : ಕಳೆದ ಏಪ್ರಿಲ್ 13 ರಂದು ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಬಿಹಾರ್ ಮೂಲದ ರಿತೇಶ್ ಎಂಬ ಆರೋಪಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರಗೈದು ಕೊಲೆ ಮಾಡಿದ್ದ. ಬಳಿಕ ಆತನನ್ನು ಬಂಧಿಸಲು ಹೋದಾಗ ಆರೋಪಿ ರಿತೇಶ್ ಪೊಲೀಸರ ಎನ್ಕೌಂಟರ್ ಗೆ ಬಲಿಯಾಗಿದ್ದ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದು, ಸಂತ್ರಸ್ತೆಯ ಹಾಗೂ ಆರೋಪಿ ಆರೋಪಿಯ ಮರಣೋತ್ತರ ಪರೀಕ್ಷೆ ವರದಿ ಮ್ಯಾಜಿಸ್ಟ್ರಿರಿಯಲ್ ತನಿಖಾವರದಿ ಸೇರಿದಂತೆ ಒಟ್ಟಾರೆಯಾಗಿ ಎಲ್ಲಾ ವರದಿಯನ್ನು ನಾಲ್ಕು ವಾರದೊಳಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.
ಕಳೆದ ಏಪ್ರಿಲ್ 13 ರಂದು 5 ವರ್ಷದ ಬಾಲಕಿಯನ್ನು ಬಿಹಾರ್ ಮೂಲದ ರಿತೇಶ್ ಎಂಬ ಆರೋಪಿ ಅಪಹರಣ ಮಾಡಿ ಬಳಿಕ ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯ ಕತ್ತು ಭೀಕರವಾಗಿ ಕೊಲೆ ಮಾಡಿದ್ದ. ತಕ್ಷಣವೇ ಪೊಲೀಸರು ಅಂದೆ ಆರೋಪಿಯ ಸುಳಿವು ಪತ್ತೆ ಮಾಡಿ ಆತನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಆತನ ಮೇಲೆ ಫೈರಿಂಗ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಎನ್ಕೌಂಟರ್ ಗೆ ಬಲಿಯಾಗಿದ್ದಾನೆ.








