ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಮತ್ತಷ್ಟು ಉಗ್ವಿಗ್ನತೆ ನಡುವೆ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ. ಹೌದು ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸ್ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಂಧೂ ನದಿಯಿಂದ ನೀರು ಸರಬರಾಜು ನಿಲ್ಲಿಸಿದರೆ ಭಾರತ ಯುದ್ಧಕ್ಕೆ ಸಿದ್ಧವಾಗಬೇಕು. ನಮ್ಮಲ್ಲಿ 130 ಪರಮಾಣು ಸಿಡಿಲತಲೆಗಳನ್ನು ಇರಿಸಲಾಗಿದೆ.ಅಲ್ಲದೇ ಘೋರಿ, ಶಾಹೀನ್ & ಘಜ್ನಿ ಕ್ಷಿಪಣಿಗಳನ್ನು ಭಾರತದ ಮೇಲೆ ದಾಳಿ ಮಾಡಲು ಇಟ್ಟಿದ್ದೇವೆ ಹೊರತು ಅವುಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ ಎಂದು ಪಾಕಿಸ್ತಾನ ಸಚಿವ ಹೇಳಿಕೆ ನೀಡಿದ್ದಾರೆ.
ಭಾರತ ನೀರು ಸರಬರಾಜನ್ನು ನಿಲ್ಲಿಸಲು ಧೈರ್ಯ ಮಾಡಿದರೆ ಭಾರತ ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು. ಪಾಕಿಸ್ತಾನದ ಪರಮಾಣು ಶಸ್ತ್ರಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ ಸಿಂಧೂ ನದಿ ನೀರಿನಲ್ಲಿಸಿದರೆ ನಾವು ಯುದ್ಧಕ್ಕೆ ಸಿದ್ದ ಅವುಗಳ ಸ್ಥಳಗಳು ದೇಶದಾದಂತ ಅಡಗಿಕೊಂಡಿವೆ. ದಾಳಿ ಮಾಡೋದು ಸಿದ್ಧವಾಗಿವೆ ಎಂದು ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸ್ ವಾರ್ನಿಂಗ್ ನೀಡಿದ್ದಾರೆ.