Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಪೂರ್ಣ ಪಠ್ಯ ವಿಳಂಬಕ್ಕೆ ಪಾಕಿಸ್ತಾನವೇ ಕಾರಣ: ಜೆ.ಡಿ. ವ್ಯಾನ್ಸ್ ಸ್ಫೋಟಕ ಮಾಹಿತಿ ಬಹಿರಂಗ!

Watch Video: ನ್ಯೂಯಾರ್ಕ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಪ್ಪಿದ ಭಾರೀ ದುರಂತ; 16 ಪ್ರವಾಸಿಗರು ಕೊನೆಗೂ ಸೇಫ್

BREAKING: ಮಹಾರಾಷ್ಟ್ರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ನಾಲ್ವರು ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಗದಿತ ಸಮಯದಲ್ಲಿ ಮಾತ್ರ `ಮದ್ಯ ಮಾರಾಟ’ : ನಿಯಮ ಪಾಲಿಸದಿದ್ದರೆ ಲೈಸೆನ್ಸ್ ರದ್ದು !
KARNATAKA

ನಿಗದಿತ ಸಮಯದಲ್ಲಿ ಮಾತ್ರ `ಮದ್ಯ ಮಾರಾಟ’ : ನಿಯಮ ಪಾಲಿಸದಿದ್ದರೆ ಲೈಸೆನ್ಸ್ ರದ್ದು !

By kannadanewsnow57

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸಿಸುವ ಸ್ಥಳ ಸೇರಿದಂತೆ ಜಿಲ್ಲೆಯ ಎಲ್ಲಾ ಮಧ್ಯದ ಅಂಗಡಿಗಳು ನಿಗದಿತ ಸಮಯದಲ್ಲಿ ಮಾತ್ರ ಮಧ್ಯ ಮಾರಾಟ ಮಾಡಬೇಕು ಹಾಗೂ ಬೇರೆ ಬಾಗಿಲುಗಳನ್ನು ಮದ್ಯ ಮಾರಾಟ ಮಾಡಿದ ಪ್ರಕರಣಗಳು ಕಂಡು ಬಂದರೆ ಪರವಾನಿಗೆ ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿದರು.

18 ವರ್ಷದೊಳಗಿನ ಮಕ್ಕಳನ್ನು ಮಧ್ಯ ಖರೀದಿಗೆ ಬಳಸಿಕೊಳ್ಳುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಮದ್ಯಕ್ಕೆ ಬಲಿಯಾಗಿ ಶಿಕ್ಷಣ, ಅಪರಾಧಕ್ಕೆ ಬಲಿಯಾಗುವ ಸಾಧ್ಯತೆಗಳಿವೆ ಆದ್ದರಿಂದ ಎಲ್ಲಾ ಮಧ್ಯದ ಅಂಗಡಿಗಳಿಗೂ ಕಡ್ಡಾಯವಾಗಿ ಸೂಚನೆ ನೀಡಬೇಕು ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಸಂದೇಶ್, ಮರಿ ಜೋಸೆಫ್, ಮಲ್ಲೇಶ್ ಅಂಬುಗ ಅವರು ಮಾತನಾಡಿ ಜಿಲ್ಲೆಯಲ್ಲಿ ಹಲವು ಮದ್ಯದ ಅಂಗಡಿಗಳಲ್ಲಿ ಬೆಳಗ್ಗೆ 7.30 ಗಂಟೆ ಯಿಂದಲೇ ಮಾರಾಟ ಪ್ರಾರಂಭ ಮಾಡುತ್ತಾರೆ ಎಂದು ಆರೋಪಿಸಿದರು ಜಿಲ್ಲಾಧಿಕಾರಿಯವರು ತನಿಖಾ ತಂಡವನ್ನು ನೇಮಿಸಿ, ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ಅಂತಹ ಮಧ್ಯ ಅಂಗಡಿಗಳಿಗೆ ದಂಡ ವಿಧಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸನ ತಾಲ್ಲೂಕಿನ ಕಡವರಹಳ್ಳಿ ಗ್ರಾಮದ ಜೀತ ವಿಮುಕ್ತಿರಿಗೆ ಭೂಮಿ ನೀಡುವ ಕುರಿತು ಕೂಡಲೇ ಸ್ಥಳ ಪರಿಶೀಲಿಸಿ ಸರ್ವೇ ಕಾರ್ಯ ಮುಕ್ತಾಯಗೊಳಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಸಕಲೇಶಪುರ ಕಾಡು ವ್ಯಾಪ್ತಿಯಲ್ಲಿ ವಾಸವಿರುವ ಪರಿಶಿಷ್ಠ ಪಂಗಡದ ಹಕ್ಕಿಪಿಕ್ಕಿ ಹಲಸರು,ಮಲೇರು,
ಮಲೇರು ಜನಾಂಗದವರಿಗೆ ರಸ್ತೆ ಇನ್ನಿತರ ಸೌಲಭ್ಯಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹಕ್ಕಿಪಿಕ್ಕಿ ಸಮುದಾಯಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿವೇಶನ ಹಂಚಿಕೆಗೆ 8 ಎಕರೆ ಜಾಗಕ್ಕೆ ಮೊದಲು ತಂತಿಬೇಲಿ ಆಗಬೇಕು, ಸಮಾಜ ಕಲ್ಯಾಣ ಇಲಾಖೆಯ ಆಸ್ತಿಯನ್ನು ಎಂದು ನಾಮಫಲಕಾಕುಂತ ಸೂಚಿಸಿದರು.

ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸಂತ್ರಸ್ತರ ಪುನರ್ ವಸತಿ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಕಲೇಶಪುರ ತಾಲೂಕಿನ ಹುಲ್ಲ ಹಳ್ಳಿ ಗ್ರಾಮದ ಸರ್ವೇ ನಂಬರ್ 16 ರಲ್ಲಿನ ಗೋಮಾಳದ 3 ಎಕರೆ ಜಮೀನನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿ ಪರಿಶಿಷ್ಠ ವರ್ಗಗಳ ಬುಡಕಟ್ಟು ಸಮುದಾಯ ಹಲಸರು ಟ್ರಸ್ಟ್ ಗೆ ಗಿಡಮೂಲಿಕೆಗಳು ಬೆಳೆಯಲು ನೀಡಲು ಕ್ರಮ ವಹಿಸಲು ಸೂಚಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪೊಲೀಸ್ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಸಮುದಾಯ ಮುಖಂಡರುಗಳ ಸೇರಿಸಿ ಅರಿವು ಕಾರ್ಯಕ್ರಮವನ್ನು ನಡೆಸಲು ಸೂಚಿಸಿದರು.

ಪೊಲೀಸ್ ಇಲಾಖೆಯು ಗ್ರಾಮಗಳಲ್ಲಿ ಗಸ್ತು ತಿರುಗಬೇಕು, ಶಾಂತಿಪಾಲನ ಸಮಿತಿ ರಚಿಸಿ ಸಭೆ ನಡೆಸಿ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುವಂತೆ ಸೂಚಿಸಿದರು.

ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ ವೆಲ್ ಗಳನ್ನು ಕೊರೆದಿದ್ದು, ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಿಲ್ಲ ಎಂದು ಸಮಿತಿಯ ಸದಸ್ಯರು ಸಭೆ ಗಮನಕ್ಕೆ ತಂದರು ಅದಕ್ಕೆ ಪ್ರತಿಕ್ರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಸಂಪರ್ಕ ಕಲ್ಪಿಸಬೇಕು ಇಲ್ಲದಿದ್ದಲ್ಲಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸಿಸುವ ಮನೆಗಳಿಗೆ ಒಂಟಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಸದಸ್ಯರು ಸಭೆಯಲ್ಲಿ ಆರೋಪಿಸಿದರು ಜಿಲ್ಲಾಧಿಕಾರಿಯವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಮಿತಿಯ ಸದಸ್ಯರಾದ ಶಿವಮ್ಮ, ಬೈರೇಶ್ ಶಿವಪ್ಪ ನಾಯಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಧೂದ್ ಫೀರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

'Liquor sales only during specified hours': License will be cancelled if rules are not followed!
Share. Facebook Twitter LinkedIn WhatsApp Email

Related Posts

dk shivakumar

ಬಿಡದಿ ಯೋಜನೆ ಕುಮಾರಸ್ವಾಮಿ ಅವರದ್ದೇ : ಸಿಎಂ ಡಿ.ಕೆ. ಶಿವಕುಮಾರ್

2 Mins Read

ಬೆಂಗಳೂರು ಜನತೆ ಗಮನಕ್ಕೆ; ಜೂನ್.22ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut in Bengaluru

2 Mins Read

ಕೃಷಿ ಅಧಿಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಇಎ!

1 Min Read
Recent News

​ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಪೂರ್ಣ ಪಠ್ಯ ವಿಳಂಬಕ್ಕೆ ಪಾಕಿಸ್ತಾನವೇ ಕಾರಣ: ಜೆ.ಡಿ. ವ್ಯಾನ್ಸ್ ಸ್ಫೋಟಕ ಮಾಹಿತಿ ಬಹಿರಂಗ!

Watch Video: ನ್ಯೂಯಾರ್ಕ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ತಪ್ಪಿದ ಭಾರೀ ದುರಂತ; 16 ಪ್ರವಾಸಿಗರು ಕೊನೆಗೂ ಸೇಫ್

BREAKING: ಮಹಾರಾಷ್ಟ್ರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ನಾಲ್ವರು ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

BREAKING: ​ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಕುಸಿದುಬಿದ್ದ ಹನುಮಾನ್ ದೇವಸ್ಥಾನದ ಮೇಲ್ಛಾವಣಿ! ಹಲವರಿಗೆ ಗಂಭೀರ ಗಾಯ

State News
dk shivakumar KARNATAKA

ಬಿಡದಿ ಯೋಜನೆ ಕುಮಾರಸ್ವಾಮಿ ಅವರದ್ದೇ : ಸಿಎಂ ಡಿ.ಕೆ. ಶಿವಕುಮಾರ್

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 2 Mins Read

ಬೆಂಗಳೂರು: “ಬಿಡದಿಯ ರೈತರು ಮುಗ್ಧರು ಮತ್ತು ಒಳ್ಳೆಯವರು, ಆದರೆ ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಬಿಡದಿ ಯೋಜನೆಯ ಪಿತಾಮಹ ಕುಮಾರಸ್ವಾಮಿ…

ಬೆಂಗಳೂರು ಜನತೆ ಗಮನಕ್ಕೆ; ಜೂನ್.22ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut in Bengaluru

ಕೃಷಿ ಅಧಿಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಇಎ!

BREAKING: ಜುಲೈ.6ಕ್ಕೆ ಕರ್ನಾಟಕ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ | Karnataka CET Results

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : [email protected]

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

[email protected]

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.