Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೃಷಿ ಅಧಿಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಇಎ!

BREAKING: ಜುಲೈ.6ಕ್ಕೆ ಕರ್ನಾಟಕ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ | Karnataka CET Results

BREAKING: ದೇಶದಲ್ಲಿ ಮತ್ತೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷಾರ್ಥಿ ಆತ್ಮಹ*ತ್ಯೆ | NEET Aspirant dies

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಜುಲೈ.6ಕ್ಕೆ ಕರ್ನಾಟಕ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ | Karnataka CET Results
KARNATAKA

BREAKING: ಜುಲೈ.6ಕ್ಕೆ ಕರ್ನಾಟಕ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ | Karnataka CET Results

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ಇತ್ಯಾದಿ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಭಾಗವಾಗಿ ಆಪ್ಷನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದೆ.

ಜೂನ್ 30ರ ಬೆಳಿಗ್ಗೆ 10ರವರೆಗೆ ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್ ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜುಲೈ‌ 6ರಂದು ಬೆಳಿಗ್ಗೆ 11ಕ್ಕೆ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ಜುಲೈ 9ರವರೆಗೆ ಇಚ್ಛೆ/ಆಯ್ಕೆ ಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು/ಮಾರ್ಪಡಿಸಲು ಅವಕಾಶ ನೀಡಲಾಗುತ್ತದೆ. ಅದಾದ ಮೂರು ದಿನಗಳ ನಂತರ ಜುಲೈ 15ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಸೋಮವಾರದ ನಂತರ ಆಪ್ಷನ್ಸ್ ದಾಖಲಿಸಲಿ. ಸದ್ಯ ನೀಟ್ ಪರೀಕ್ಷೆ ಕಡೆಗೆ ಗಮನ ಇರಲಿ ಎಂದು ಅವರು ಸಲಹೆ‌ ನೀಡಿದ್ದಾರೆ.

ಕೃಷಿ, ಪಶು ವೈದ್ಯಕೀಯ, ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದೆ. ಎಂಜಿನಿಯರಿಂಗ್ ಕೋರ್ಸ್ ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅಂತಿಮ ಪಟ್ಟಿಗೆ ಕಾಯುತ್ತಿದ್ದೇವೆ. ಬಂದ ನಂತರ ಎಲ್ಲ ಮಾಹಿತಿಯನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗುವುದು. ಅಲ್ಲಿಯವರೆಗೂ ಅಭ್ಯರ್ಥಿಗಳು ಕಾಯುವ ಅಗತ್ಯ ಇಲ್ಲ. ಬದಲಿಗೆ ಪರ್ಯಾಯವಾಗಿ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ವಿವರಿಸಿದರು.

ಪ್ರೀ ಸುತ್ತಿನ ಕೌನ್ಸೆಲಿಂಗ್ ಇಲ್ಲ:

ನೀಟ್ ಮರು ಪರೀಕ್ಷೆ ಕಾರಣಕ್ಕೆ ವೈದ್ಯಕೀಯ ಅಲ್ಲದೆ ಇತರ ಕೋರ್ಸ್ ಓದುವ ಅಭ್ಯರ್ಥಿಗಳಿಗೆ ಆಗುತ್ತಿದ್ದ ವಿಳಂಬ ತಪ್ಪಿಸಲು ಪ್ರೀ ಸುತ್ತಿನ ಸೀಟು ಹಂಚಿಕೆಗೆ ಮಾಡಿದ್ದ ತೀರ್ಮಾನವನ್ನು ಕೈಬಿಟ್ಟಿದ್ದು, ಈ ಮೊದಲಿನ ಹಾಗೆಯೇ‌ ಮೊದಲ ಸುತ್ತಿನಿಂದಲೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

ಯಾರಿಗೆ ಇಚ್ಛೆ ಪ್ರಕಾರ ಸೀಟು ಸಿಗುತ್ತದೊ ಅಂತಹವರಿಗೆ ಹೋಗಿ ಪ್ರವೇಶ ಪಡೆಯಲು ಪ್ರೀ ಸುತ್ತಿನಲ್ಲಿ ಅವಕಾಶ ನೀಡುವ ಯೋಜನೆ ಇತ್ತು. ಆದರೆ ಈ ಬಗ್ಗೆ ಅನೇಕರು ಪ್ರೀ ಸುತ್ತಿನಲ್ಲಿ ಸೀಟು ಉನ್ನತೀಕರಣ ಸೇರಿದಂತೆ ಮೊದಲ ಸುತ್ತಿನಲ್ಲಿರುವ ಛಾಯ್ಸ್ ಗೆ ಅವಕಾಶ ನೀಡಬೇಕೆನ್ನುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಕೃಷಿ ಅಧಿಕಾರಿ: ದಿನಾಂಕ ವಿಸ್ತರಣೆ:

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 25ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಬಿ.ಇ ಬಯೊಟೆಕ್ನಾಲಜಿ ಪದವಿಯನ್ನು ಬಿ.ಟೆಕ್ ಬಯೋಟೆಕ್ನಾಲಜಿ ಪದವಿಗೆ ಸಮಾನವೆಂದು ಸರ್ಕಾರ ಪರಿಗಣಿಸಿದೆ. ಹೀಗಾಗಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿ.ಇ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

BREAKING: ದೇಶದಲ್ಲಿ ಮತ್ತೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷಾರ್ಥಿ ಆತ್ಮಹ*ತ್ಯೆ | NEET Aspirant dies

Share. Facebook Twitter LinkedIn WhatsApp Email

Related Posts

ಕೃಷಿ ಅಧಿಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಇಎ!

1 Min Read

BREAKING: ಮೈಸೂರು ದಸರಾ ಇತಿಹಾಸದಲ್ಲೇ ಮೊದಲು: ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

1 Min Read

Fact Check: ಏರ್ಟೆಲ್ ಸಿಮ್ ಇದ್ದರೆ ಗೃಹಲಕ್ಷ್ಮಿ ಹಣ ಬರಲ್ವ? ಇಲ್ಲಿದೆ ಅಸಲಿ ಸತ್ಯ

2 Mins Read
Recent News

ಕೃಷಿ ಅಧಿಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಇಎ!

BREAKING: ಜುಲೈ.6ಕ್ಕೆ ಕರ್ನಾಟಕ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ | Karnataka CET Results

BREAKING: ದೇಶದಲ್ಲಿ ಮತ್ತೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷಾರ್ಥಿ ಆತ್ಮಹ*ತ್ಯೆ | NEET Aspirant dies

​ನೀಟ್ ಪರೀಕ್ಷೆ ಅಕ್ರಮಕ್ಕೆ ಬ್ರೇಕ್: ಪತ್ರಿಕೆ ಸೋರಿಕೆ ತಡೆಯಲು ‘ಟೆಲಿಗ್ರಾಂ’ ಆ್ಯಪ್ ಬ್ಯಾನ್ ಆದೇಶ ಎತ್ತಿಹಿಡಿದ ಹೈಕೋರ್ಟ್!

State News
KARNATAKA

ಕೃಷಿ ಅಧಿಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕೆಇಎ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸಿಹಿ ಸುದ್ದಿಯೊಂದನ್ನು…

BREAKING: ಜುಲೈ.6ಕ್ಕೆ ಕರ್ನಾಟಕ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ | Karnataka CET Results

BREAKING: ಮೈಸೂರು ದಸರಾ ಇತಿಹಾಸದಲ್ಲೇ ಮೊದಲು: ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

Fact Check: ಏರ್ಟೆಲ್ ಸಿಮ್ ಇದ್ದರೆ ಗೃಹಲಕ್ಷ್ಮಿ ಹಣ ಬರಲ್ವ? ಇಲ್ಲಿದೆ ಅಸಲಿ ಸತ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : [email protected]

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

[email protected]

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.