ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸಿದ್ದಾರ್ಥ್ ಲೂಥ್ರಾ ವಾದಿಸಿದರೆ, ನಟ ದರ್ಶನ್ ಪರವಾಗಿ ಅಭಿಷೇಕ್ ಮನುಸಿಘವಿ ವಾದಿಸಿದರು. ವಾದ ಪ್ರತಿವಾದ ಬಳಿಕ ವಿಚಾರಣೆ ನಡೆಸಿದ ನ್ಯಾ. ಜೆಬಿ ಪರ್ದಿವಾಲಾ ಹಾಗು ನ್ಯಾ. ಮಹದೇವನ್ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ಮೇ 14ಕ್ಕೆ ಮಂದೂಡಿ ಆದೇಶಿಸಿತು.
ವಿಚಾರಣೆ ಆರಂಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಕೀಲ ಸಿದ್ಧಾರ್ಥ ಲೂಥ್ರಾ ಅವರು ವಾದ ಮಂಡಿಸಿದರು.ಈ ವೇಳೆ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆಯಾ? ಎಂದು ಜಡ್ಜ್ ಪ್ರಶ್ನಿಸಿದರು. ಹೌದು ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆ ಎಂದು ಸಿದ್ಧಾರ್ಥ ಲೂಥ್ರಾ ಅವರು ಜಡ್ಜ್ ಅವರಿಗೆ ತಿಳಿಸಿದರು. ಆರೋಪಿ ಏನು ರಾಜಕಾರಣಿಯಾ? ಎಂದು ಮರು ಪ್ರಶ್ನಿಸಿದರು. ರಾಜಕಾರಣಿ ಅಲ್ಲ ಜನಪ್ರಿಯ ನಟ ಎಂದು ಸಿದ್ಧಾರ್ಥ ಲೂಥ್ರಾ ಅವರು ತಿಳಿಸಿದರು.
ನಂತರ ಪಟ್ಟಣಗೆರೆ ಶೆಡ್ ಬಳಿ ನಡೆದ ಘಟನೆಯನ್ನು ಸಿದ್ಧಾರ್ಥ ಲೂಥ್ರಾ ಅವರು ಜಡ್ಜ್ ಅವರಿಗೆ ವಿವರಿಸಿದರು. ಎಲೆಕ್ಟ್ರಾನಿಕ್ ಎವಿಡೆನ್ಸ್ ಇದೆ. ಅಲ್ಲದೆ ಸಿಸಿಟಿವಿ ದೃಶ್ಯಗಳು ಕೂಡ ಸಿಕ್ಕಿವೆ. ಮೊದಲ ಆರೋಪಿ ಪವಿತ್ರಾಗೌಡ ಮಾಡಿರುವ ಮೆಸೇಜ್ ಗಳು ಇವೆ ಎಂದರು. ಈ ವೇಳೆ ಮರಣೋತ್ತರ ಪರೀಕ್ಷೆಯ ವರದಿ ಕೊಡಿ ಎಂದು ಜಡ್ಜ್ ಕೇಳಿದರು. ಮೃತದೇಹ ಎಲ್ಲಿ ಸಿಕ್ಕಿದೆ? ಮತ್ತು ದೇಹ ನೋಡಿದವರು ಯಾರು? 11 ದಿನಗಳ ಬಳಿಕ ನೀಡಿದ್ದಾರೆ. ಅಲ್ಲಿಯವರೆಗೆ ಏನು ಮಾಡುತ್ತಿದ್ದರು? 7 ಜನರು ಹೆಸರು ಹೇಳಿದ್ದಾರಾ? ಸಂತ್ರಸ್ತನನ್ನು ಎಲ್ಲಿಂದ ಕರೆದುಕೊಂಡು ಬರಲಾಯಿತು? ಎಂದು ನ್ಯಾಯಾಧೀಶರು ಸರ್ಕಾರದ ಪರ ವಕೀಲ ಸಿದ್ಧಾರ್ಥ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.
ನ್ಯಾಯಾಧೀಶರ ಪ್ರಶ್ನೆಗೆ ಸಿದ್ದಾರ್ಥ್ ಲೂಥ್ರಾ ಅವರು ಉತ್ತರಿಸಿದರು. ಶೆಡ್ ನಲ್ಲಿ ಹತ್ಯೆ ನಡೆದಿದೆ. ನಂತರ ಅಪಾರ್ಟ್ಮೆಂಟ್ ಬಳಿ ದೇಹ ಸಿಕ್ಕಿದೆ. ರೇಣುಕಾ ಸ್ವಾಮಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಮೂಳೆಗಳು ಮುರಿದಿವೆ. ರಕ್ತ ಸುರಿದಿದೆ ಅಲ್ಲದೆ ಮರ್ಮಾಂಗಕ್ಕೆ ಗಂಭೀರವಾದ ಗಾಯಗಳಾಗಿವೆ. ದೇಹದ ಪ್ರಮುಖ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಜಡ್ಜ್ ಅವರಿಗೆ ಸಂಪೂರ್ಣವಾಗಿ ವಿವರಿಸಿದರು.ಪವಿತ್ರ ಗೌಡ ದರ್ಶನ್ ಪತ್ನಿಯೇ ಎಂದು ಜಡ್ಜ್ ಪ್ರಶ್ನಿಸಿದರು. ಅಲ್ಲ ಮಿಸ್ಟ್ರೆಸ್ ಎಂದು ಸಿದ್ಧಾರ್ಥ ಲೂಥ್ರಾ ಉತ್ತರಿಸಿದರು. ದರ್ಶನ್ ಗೆ ಮದುವೆಯಾಗಿದೆಯೇ ಎಂದು ನ್ಯಾಯಾಧೀಶರು ಮರು ಪ್ರಶ್ನಿಸಿದಾಗ ಹೌದು ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಅವರು ಉತ್ತರಿಸಿದರು.
ಸಿದ್ದಾರ್ಥ್ ಲೂಥ್ರಾ ಬಳಿಕ ಕೊಲೆಯ 2ನೇ ಆರೋಪಿಯಾದ ದರ್ಶನ್ ಪರವಾಗಿ ಅಭಿಷೇಕ್ ಮನುಸಿಂಘವಿ ಅವರು ವಾದ ಆರಂಭಿಸಿದರು. ನಟ ದರ್ಶನ್ ಅಭಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಯಾವ ಜಾಗದಲ್ಲಿಯೂ ಸಾಕ್ಷ್ಯಾಧಾರಗಳು ಇಲ್ಲ. ದರ್ಶನ್ ಅತ್ತೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆಗ ಹತ್ಯೆ ಮಾಡಿದ್ದಕ್ಕೆ ಫೋಟೋಗಳಿವೆ ಎಂದು ಸಿದ್ದಾರ್ಥ್ ಲೂಥ್ರಾ ತಿಳಿಸಿದರು. ಈ ವೇಳೆ ಯಾವ ಫೋಟೋ ಎಂದು ನ್ಯಾಯಾಧೀಶರು ಕೇಳಿದರು.ದರ್ಶನ್ ವಿಡಿಯೋದಲ್ಲಿಲ್ಲ. ದರ್ಶನ್ ಮೊಬೈಲ್ನಿಂದ ವಿಡಿಯೋ ಮಾಡಿಲ್ಲ ರೇಣುಕಾಸ್ವಾಮಿ ಕೊಲೆಗೂ ಹಾಗೂ ನಟ ದರ್ಶನ್ ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. 3 ಸೆಕೆಂಡ್ ವಿಡಿಯೋ ಇದೆ ಎನ್ನುತ್ತಿದ್ದಾರೆ. ಅದರಲ್ಲಿ ಏನು ಗೊತ್ತಾಗುತ್ತದೆ ಸಾಕ್ಷ ಎಂದು ಹೇಗೆ ಅದನ್ನು ಪರಿಗಣಿಸಲಾಗುತ್ತದೆ? ಎಂದು ನಟ ದರ್ಶನ್ ಪರವಾಗಿ ಅಭಿಷೇಕ್ ಮನುಸಿಂಘವಿ ವಾದ ಮಂಡಿಸಿದರು.
ದರ್ಶನ್ ವಿಡಿಯೋ ನೋಡಿಲ್ಲ. ಐವಿಟ್ನೆಸ್ ಗಳ ಹೇಳಿಕೆಯನ್ನು ಪಡೆಯದೆ ನಟ ದರ್ಶನ್ ಬಂಧಿಸಲಾಗಿದೆ. ಬಂಧಿಸಿದ ಬಳಿಕ ಐವೀಟ್ನೆಸ್ ಗಳ ಹೇಳಿಕೆ ಪಡೆಯಲಾಗಿದೆ. ಪಾರ್ಕಿಂಗ್ ಪ್ಲೇಸ್ ನಲ್ಲಿ ಹತ್ಯೆಯಾಗಿದೆ ಎನ್ನುತ್ತಿದ್ದಾರೆ. ಆ ಜಾಗದ ಮಾಲೀಕ ನಾನು ಅಲ್ಲ ಆ ಜಾಗಕ್ಕೂ ನನಗೂ ಸಂಬಂಧ ಅಲ್ಲ ದರ್ಶನ್ ಬಂಧಿಸಲು ಯಾವುದೇ ಕಾರಣಗಳು ಇರಲಿಲ್ಲ ಎಂದು ದರ್ಶನ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘವಿ ವಾದ ಮಂಡಿಸಿದರು.ನೀವು ಪಾರ್ಕಿಂಗ್ ಎನ್ನುತ್ತಿದ್ದೀರಿ ಸಿದ್ದಾರ್ಥ್ ಅವರು ಶೆಡ್ ಎನ್ನುತ್ತಿದ್ದಾರೆ. ಆ ಜಾಗ ಏನು ಎನ್ನುವುದನ್ನು ಸರಿಯಾಗಿ ವಿವರಿಸಿ ಎಂದು ಜಡ್ಜ್ ಕೇಳಿದರು. ಹತ್ಯೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎಂದು ನಿಮಗೆ ಹೇಗೆ ಅನ್ನಿಸಿತು? ಯಾವ ಲೀಡ್ ನಿಮಗೆ ಸಿಕ್ತು? ಎಂದು ಜಡ್ಜ್ ಪ್ರಶ್ನಿಸಿದರು. ಪಾರ್ಕಿಂಗ್ ಜಾಗದ ಮಾಲೀಕರು ಯಾರು? ಎಂದಾಗ 8ನೇ ಆರೋಪಿ ಅಂಕಲ್ ಜಾಗ ಎಂದು ಅಭಿಷೇಕ್ ಅವರು ಜಡ್ಜ್ ಅವರಿಗೆ ತಿಳಿಸಿದರು.
ಲೇಡಿ ಪವಿತ್ರಗೌಡ ಶೆಡ್ ನಲ್ಲಿ ಇದ್ರ? ಎಂದು ಜಡ್ಜ್ ಕೇಳಿದಾಗ ಹೌದು ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಅವರು ಉತ್ತರಿಸಿದರು.ಬಂಧನಕ್ಕೆ ಕಾರಣ ಕೊಡಬೇಕು ಆದರೆ ಆ ಕಾರಣವನ್ನೇ ಕೊಟ್ಟಿಲ್ಲ ಎಂದು ದರ್ಶನ್ ಪರ ವಕೀಲ ಅಭಿಷೇಕ್ ಅವರು ಜಡ್ಜ್ ಅವರಿಗೆ ತಿಳಿಸಿದರು. ಈ ವೇಳೆ ಜೂನ್ 11 ರಂದು ಆರೋಪಿ ಬಂಧನಕ್ಕೆ ಸಿಕ್ಕ ಲೀಡ್ ಏನು? ಯಾವ ದಿನದಂದು ಪಂಚನಾಮೆ ಮಾಡಲಾಯಿತು? ವಿವರಣೆ ಕೊಡಿ ಎಂದು ಪೋಲೀಸರ ಪರ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು.ವಾದ ಪ್ರತಿವಾದ ಬಳಿಕ ವಿಚಾರಣೆ ನಡೆಸಿದ ನ್ಯಾ. ಜೆಬಿ ಪರ್ದಿವಾಲಾ ಹಾಗು ನ್ಯಾ. ಮಹದೇವನ್ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ಮೇ 14ಕ್ಕೆ ಮಂದೂಡಿ ಆದೇಶಿಸಿತು.