Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಿಕಾಸಿ ಹಿಡಿದು, ಮಣ್ಣು ಅಗೆದ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ
KARNATAKA

ಪಿಕಾಸಿ ಹಿಡಿದು, ಮಣ್ಣು ಅಗೆದ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ

By kannadanewsnow0707/04/2025 7:38 PM
Education Minister S. Sudhakaran digs up mud with pickaxes. Madhu Bangarappa

ಶಿವಮೊಗ್ಗ: ಸಾರ್ವಜನಿಕವಾಗಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಲೆಂದು ಅಪೇಕ್ಷಿಸದೆ ತಾವು ಕೂಡ ಸ್ವಯಂ ಪ್ರೇರಿತರಾಗಿ ಕೈಲಾದ ಸೇವೆ ಸಲ್ಲಿಸಲು ಸಿದ್ದರಾಗಬೇಕು. ಎಲ್ಲರಲ್ಲೂ ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನವಿರಬೇಕು. ಮಕ್ಕಳ ಭವಿಷ್ಯ ರೂಪಿಸುವುದು ಮಾತ್ರವಲ್ಲ ಸರ್ಕಾರದ ಅಸ್ತಿಯ ರಕ್ಷಣೆಯ ಹೊಣೆಯೂ ನಮ್ಮೆಲ್ಲರದ್ದಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಸೊರಬ ತಾಲೂಕು ಹುರುಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗೆ ನೂತನ ಶಾಲಾ ಕಾಂಪೌAಡ್ ಮತ್ತು ಅಡುಗೆ ಕೋಣೆಯ ಕಾಮಗಾರಿಗಳಿಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಯೋಜನೆ ಮತ್ತು ಸಾಂಕಿಕ ಸಚಿವ ಡಿ. ಸುಧಾಕರ್ ಹಾಗೂ ಸ್ಥಳೀಯರೊಂದಿಗೆ ಭಾಗವಹಿಸಿ, ಶಾಲಾ ಕಾಂಪೌAಡ್ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಶ್ರಮದಾನ ಮಾಡಿದ ನಂತರ ಗಿಡನೆಟ್ಟು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿದ ಅವರು ಶಾಲಾ ಸ್ವತ್ತು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ನೂತನ ಶಾಲಾ ಕೊಠಡಿಯ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿತ್ತು. ಪ್ರಸ್ತುತ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು.

ದೇಶದ ಉಜ್ವಲ ಭವಿಷ್ಯ ರೂಪಿಸುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಶಿಕ್ಷಣ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಸ್ಫೂರ್ತಿ ದಾಯಕವಾದ ಇಂತಹ ಕಾರ್ಯಕ್ರಮದಲ್ಲಿ ಶ್ರಮದಾನಕ್ಕೆ ಭಾಗಿಯಾದ ತಮಗೆ ಅಭಿನಂದನೆಗಳು ಎಂದರು.

ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರ 1591 ಕೋಟಿ ರೂ. ಗಳ ಆರ್ಥಿಕ ನೆರವಿನೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಆರು ದಿನಗಳು ಪೌಷ್ಟಿಕ ಆಹಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ನೀಡಲಾಗುತ್ತಿದೆ. ಅಲ್ಲದೆ ಬಟ್ಟೆ, ಶೂ, ಸಾಕ್ಸ್ ಮತ್ತಿತರ ಸೌಲಭ್ಯಗಳೊಂದಿಗೆ ಶಾಲೆಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಇಂದಿನ ಮಕ್ಕಳು ದೇಶದ ಅತ್ಯಂತ ಉಚ್ಚ ಸ್ಥಾನ ಅಲಂಕರಿಸಿ ಸೇವೆ ನೀಡುವಂತಾಗಬೇಕು. ರಾಜ್ಯದ ಎಲ್ಲಾ ವರ್ಗದ ಜನರಿಗೆ ಮದ್ಯವರ್ತಿಗಳ ನೆರವಿಲ್ಲದೆ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುತ್ತಿದೆ. ರಾಜ್ಯದ ಪ್ರತಿ ಮನೆಗೂ ಯೋಜನೆಯ ಲಾಭ ದೊರೆತಿದೆ. ಮುಂದಿನ ದಿನಗಳಲ್ಲಿ ಜನರ ಅಶೋತ್ತರಾಗಳಿಗೆ ಪೂರಕವಾಗಿ ಇನ್ನಷ್ಟು ಸೇವೆ ಮಾಡುವ ಉತ್ಸಾಹ ಬಂದಿದೆ ಎಂದರು.

ರಾಜ್ಯದ ಅತಿಹೆಚ್ಚು ಅಂದರೆ 1300 ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಂಜೀವಿನಿಯಾಗಿದೆ ಎಂದರು.
* ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ಸರ್ಕಾರದ ಪ್ರತಿನಿಧಿಯಾಗಿ ಸಾರ್ವಜನಿಕ ರೊಡಗೂಡಿ ಕಾಂಪೌAಡ್ ನಿರ್ಮಾಣ ಕಾರ್ಯದಲ್ಲಿ ಶ್ರಮದಾನಕ್ಕೆ ಮುಂದಾಗಿರುವುದು ರಾಜ್ಯಕ್ಕೆ ಮಾದರಿಯಾಗಿದೆ.
– ಆರ್. ಎಂ. ಮಂಜುನಾಥಗೌಡ, ಅಧ್ಯಕ್ಷರು, ಒಂಆಃ ಶಿವಮೊಗ್ಗ.
* ಶ್ರಮಿಕ ವರ್ಗಕ್ಕೆ ಬಲ ತುಂಬುವ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ದೂರದೃಷ್ಟಿಯ ಯೋಜನೆ ನರೇಗಾ ಅತ್ಯದ್ಭುತ ಯೋಜನೆಯಾಗಿದೆ. ಹಲವು ದಶಕಗಳ ನಂತರವು ಯೋಜನೆ ಪ್ರಚಲಿತದಲ್ಲಿರುವುದು ಯೋಜನೆಯ ಮಹತ್ವ ವನ್ನು ಸಾರಿ ಹೇಳುತ್ತದೆ.
– ಶ್ರೀಮತಿ ಬಲ್ಕಿಶ್ ಬಾನು, ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ .
ಕಾರ್ಯಕ್ರದಲ್ಲಿ ಉಪಸ್ಥಿತರಿದ್ದ ರಾಜ್ಯ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಅವರು ಮಾತನಾಡಿ, ರಾಜ್ಯದ ಪ್ರಗತಿಗೆ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರ ಎಸ್. ಬಂಗಾರಪ್ಪ ಅವರು ಮೇಲ್ಪಕ್ತಿಯಲ್ಲಿ ಗುರುತಿಸಲಾಗುತ್ತಿದೆ. ಅವರ ಉಚಿತ ವಿದ್ಯುತ್ ನೀಡುವ ಯೋಜನೆ ಇಂದಿಗೂ ಪ್ರಚಲಿತದಲ್ಲಿದೆ. ದೇವಸ್ಥಾನಕ್ಕಿಂತ ಶಾಲಾ ಕಟ್ಟಡ ನಿರ್ಮಾಣ ಅತ್ಯಂತ ಪುಣ್ಯದ ಕಾರ್ಯ. ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಸಚಿವ ಮಧು ಅವರು ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದಲ್ಲಿ ಹುರುಳಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಅನಸೂಯ ಶಿವಕುಮಾರ್, ಮುಖಂಡ ಆರ್. ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
“ ಸಚಿವ ಎಸ್. ಮಧು ಬಂಗಾರಪ್ಪ ಅವರೇ ಸ್ವತಃ ಗುದ್ದಲಿ, ಪಿಕಾಸಿ ಹಿಡಿದು, ಗುಂಡಿ ತೆಗೆದು, ಅಕ್ಷರಷಃ ತಲೆಯ ಮೇಲೆ ಮಣ್ಣಿನ ಬುಟ್ಟಿ ಹೊತ್ತು ಶ್ರಮದಾನ ಮಾಡಿದ್ದು, ಎಲ್ಲರಿಗೂ ಪ್ರೇರಣೆಯಾಗಿತ್ತು.

Education Minister S. Sudhakaran digs up mud with pickaxes. Madhu Bangarappa ಪಿಕಾಸಿ ಹಿಡಿದು ಮಣ್ಣು ಅಗೆದ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ
Share. Facebook Twitter LinkedIn WhatsApp Email

Related Posts

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

02/03/2026 8:42 PM1 Min Read

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM1 Min Read

ಜೆಡಿಎಸ್ ಗ್ರೇಟರ್ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ: ಪಕ್ಷ ಸಂಘಟಿಸಲು ಸ್ಪಷ್ಟ ನಿರ್ದೇಶನ

02/03/2026 8:17 PM2 Mins Read
Recent News

ಇರಾನ್’ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಬೆಲೆ ಎಷ್ಟು ಹೆಚ್ಚಾಗ್ಬೋದು? ಪರಿಣಾಮವೇನು ಗೊತ್ತಾ?

02/03/2026 10:08 PM

Good News ; ಗಂಟೆಗಳಲ್ಲೇ ಬದಲಾಯ್ತು ದೃಶ್ಯ, ಚಿನ್ನದ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ, ಸಧ್ಯದ ದರ ಹೀಗಿದೆ!

02/03/2026 9:45 PM

ಭಾರತದ ವಿಮಾನಯಾನ ವಲಯದ ಮೇಲೆ ಯುದ್ಧದ ಪರಿಣಾಮ ; 350ಕ್ಕೂ ಹೆಚ್ಚು ವಿಮಾನಗಳು ರದ್ದು!

02/03/2026 9:24 PM

BREAKING : ‘ಅಗಾಧ ಸ್ನೇಹ’ : ಇರಾನ್ ಯುದ್ಧದ ನಡುವೆಯೂ ಇಸ್ರೇಲ್ ಜೊತೆ ನಿಂತಿದ್ದಕ್ಕಾಗಿ ಪ್ರಧಾನಿ ಮೋದಿಗೆ ‘ನೆತನ್ಯಾಹು’ ಧನ್ಯವಾದ

02/03/2026 8:56 PM
State News
KARNATAKA

ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆಯಂತೆ ಬೆಂಗಳೂರಿನ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಸರ್ಕಾರ ಆದೇಶ

By kannadanewsnow0902/03/2026 8:42 PM KARNATAKA 1 Min Read

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ…

ಶಿವಮೊಗ್ಗ: ಸೊರಬದ ದೂಗೂರಿಗೆ ಮತ್ತೆ ಕಾಡಾನೆಗಳು ಎಂಟ್ರಿ, ಆತಂಕದಲ್ಲಿ ರೈತರು

02/03/2026 8:37 PM

ಜೆಡಿಎಸ್ ಗ್ರೇಟರ್ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ: ಪಕ್ಷ ಸಂಘಟಿಸಲು ಸ್ಪಷ್ಟ ನಿರ್ದೇಶನ

02/03/2026 8:17 PM

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

02/03/2026 8:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.