Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರಿಗೆ ಗುಡ್ ನ್ಯೂಸ್ : ನೀರಾವರಿ ಸಲಹಾ ಸಮಿತಿ ವೇಳಾಪಟ್ಟಿಯಂತೆ ಕಾಲುವೆಗಳಿಗೆ ನೀರು ಬಿಡುಗಡೆ.!
KARNATAKA

ರೈತರಿಗೆ ಗುಡ್ ನ್ಯೂಸ್ : ನೀರಾವರಿ ಸಲಹಾ ಸಮಿತಿ ವೇಳಾಪಟ್ಟಿಯಂತೆ ಕಾಲುವೆಗಳಿಗೆ ನೀರು ಬಿಡುಗಡೆ.!

By kannadanewsnow57

ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬಿತ್ತನೆ ವಿಳಂಬವಾಗಿ ಮಾಡಿರುವುದರಿಂದ ಹಿಂಗಾರು ಹಂಗಾಮಿಗೆ ನಿಂತಿರುವ ಬೆಳಗಳನ್ನು ಸಂರಕ್ಷಿಸಲು ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ವಿವಿಧ ಕಾಲುವೆಗಳಿಗೆ ಕುಡಿಯುವ ನೀರು ಒಳಗೊಂಡAತೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಮುನಿರಾಬಾದ್ ನ ತುಂಗಭದ್ರಾ ಯೋಜನಾ ವೃತ್ತದ ಕನೀನಿನಿ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಎಲ್.ಬಸವರಾಜ ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಶಿವರಾಜ ಎಸ್. ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ 2024-25ನೇ ಸಾಲಿನ 123ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ನೀರು ಹರಿಸುವ ಕಾಲಾವಧಿ:
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ:
ಎಡದಂಡೆ ಕಾಲುವೆಯಡಿ ಲಭ್ಯವಾಗುವ ನೀರಿನಲ್ಲಿ ಏ.01 ರಿಂದ 10 ರವರೆಗೆ ಕುಡಿಯುವ ನೀರು ಒಳಗೊಂಡAತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯೂಸೆಕ್ ನಂತೆ ಹರಿಸಲಾಗುವುದು.
ಎಡದಂಡೆ ವಿಜಯನಗರ ಕಾಲುವೆ:
ಏ.11 ರಿಂದ ರಿಂದ ಮೇ 10 ರವರೆಗೆ 150 ಕ್ಯೂಸೆಕ್ ನಂತೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ:
ಬಲದಂಡೆ ಕೆಳಮಟ್ಟದ ಕಾಲುವೆಯಡಿ ಲಭ್ಯವಾಗುವ ನೀರಿನಲ್ಲಿ ಏ.01 ರಿಂದ 10 ರ ವರೆಗೆ ಕುಡಿಯುವ ನೀರು ಒಳಗೊಂಡAತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 450 ಕ್ಯೂಸೆಕ್ ನಂತೆ ಹರಿಸಲಾಗುವುದು.

ರಾಯ ಬಸವಣ್ಣ ಕಾಲುವೆ:
ಏ.01 ರಿಂದ ಮೇ 31 ರವರೆಗೆ ಲಭ್ಯವಾಗುವ ನೀರನಲ್ಲಿ 200 ಕ್ಯೂಸೆಕ್ ನಂತೆ ಹರಿಸಲಾಗುವುದು.
ನದಿ ಪೂರಕ: ಸುಮಾರು 90 ಕ್ಯೂಸೆಕ್ ನಂತೆ ನದಿ ಪೂರಕ ಕಾರ್ಖಾನೆ ಒಳಗೊಂಡAತೆ ನೀರು ಹರಿಸಲಾಗುವುದು.

ರೈತ ಭಾಂದವರಲ್ಲಿ ಮನವಿ:
ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಹಿಂಗಾರು ಹಂಗಾಮಿನ ಬೆಳೆದು ನಿಂತ ಬೆಳಗಳನ್ನು ಸಂರಕ್ಷಿಸಲು ಹಾಗೂ ಕುಡಿಯುವ ನೀರು ಒಳಗೊಂಡAತೆ ಹರಿಸಲಾಗುವುದು.

ಹಾಗಾಗಿ ರೈತರು ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಧಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು ಎಂದು ರೈತ ಭಾಂದವರಲ್ಲಿ ಕೋರಲಾಗಿದೆ.
ರೈತರು ಅನಧಿಕೃತವಾಗಿ ನೀರು ಪಡೆದು ಭತ್ತ, ಇತರೆ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Good news for farmers: Water released to canals as per Irrigation Advisory Committee schedule!
Share. Facebook Twitter LinkedIn WhatsApp Email

Related Posts

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

2 Mins Read

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

2 Mins Read

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

2 Mins Read
Recent News

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

SHOCKING : ಮನೆಯ ಹೊರಗೆ, ಬೆಡ್ ರೂಮ್ ನಲ್ಲೂ `CCTV’ ಅಳವಡಿಸಿದ್ದ ಪಾಪಿ ಪತಿ : ಮದುವೆಯಾಗಿ 48 ದಿನಗಳಲ್ಲೇ ನವವಿವಾಹಿತೆ ಆತ್ಮಹತ್ಯೆ.!

State News
KARNATAKA

ಅಂತಿಮ ಘಟ್ಟಕ್ಕೆ ತಲುಪಿದ ವಿಧಾನ ಪರಿಷತ್ ಚುನಾವಣೆ : ಈವರೆಗೆ ಒಟ್ಟು 221 ಶಾಸಕರಿಂದ ಮತ ಚಲಾವಣೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಇಂದು (ಗುರುವಾರ) ವಿಧಾನಸೌಧದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಶಾಸಕರು ಸರದಿಯಲ್ಲಿ ಬಂದು…

BIG NEWS : ರಾಜ್ಯದಲ್ಲಿ ಹೋಂಸ್ಟೇ ನಿಯಂತ್ರಣಕ್ಕೆ ಸಮಗ್ರ ನೀತಿ ರೂಪಿಸಲು, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

BREAKING : ಬಿಜೆಪಿಗೆ ಮತ ಹಾಕುವುದಾಗಿ ಶಾಸಕ ಯತ್ನಾಳ್ ಪತ್ರ : ಚುನಾವಣಾಧಿಕಾರಿಗೆ ದೂರು ನೀಡಿದ ಕಾಂಗ್ರೆಸ್

BIG NEWS : ರೇಣುಕಾ ಸ್ವಾಮಿ ಕೊಲೆ ಕೇಸ್ : ಹೈಕೋರ್ಟ್ ನಲ್ಲಿರುವ ಪ್ರಕರಣದಿಂದ ನಿವೃತ್ತಿಯಾದ ದರ್ಶನ್ ಪರ ವಕೀಲ ಸುನಿಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.