ಶಿವ ಪರಿವಾರದ ಪೂಜೆಗೆ ಪ್ರದೋಷ ವ್ರತ ಮಂಗಳಕರ. ಈ ದಿನ ಭಕ್ತಿಯಿಂದ ಪರಶಿವನನ್ನು ಧ್ಯಾನಿಸಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ನಂಬಿಕೆ. ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ಬಹಳ ಮಹತ್ವವಿದೆ. ಶ್ರದ್ಧೆಯಿಂದ ಉಪವಾಸ ಕೈಗೊಂಡು ಈ ದಿನ ವ್ರತವನ್ನು ಎಲ್ಲರೂ ಆಚರಿಸುತ್ತಾರೆ. ಅಂತೆಯೇ, ಈ ಸಲ ಗುರುವಾರ ಪ್ರದೋಷ ವ್ರತ ಬಂದಿದೆ. ಹೀಗಾಗಿ, ಇದನ್ನು ಗುರು ಪ್ರದೋಷ ವ್ರತ ಎಂದೂ ಕರೆಯಲಾಗುತ್ತದೆ. ಗುರು ಪ್ರದೋಷ ವ್ರತದ ಮಹತ್ವ, ಮುಹೂರ್ತ, ಪೂಜಾ ವಿಧಿ ಮತ್ತು ಪರಿಹಾರಗಳ ಬಗ್ಗೆ ಇಲ್ಲಿ ನೋಡೋಣ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಗುರು ಪ್ರದೋಷ ವ್ರತ;
ಹಿಂದೂ ಧರ್ಮದಲ್ಲಿ ಸಾಕಷ್ಟು ವೃತಾಚರಣೆಗಳಿವೆ. ಅವುಗಳಲ್ಲಿ ಪ್ರದೋಷ ವ್ರತ ಕೂಡಾ ಒಂದು. ಪ್ರದೋಷ ವ್ರತಕ್ಕೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಈ ದಿನ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಶಿವ ಪಾರ್ವತಿಗೆ ಬಲು ನೆಚ್ಚಿನ ದಿನ ಇದು. ಶಿವ ಪರಿವಾರದ ಪೂಜೆಗೆ ಪ್ರದೋಷದ ದಿನ ಮಂಗಳಕರ. ಹೀಗಾಗಿ, ಈ ದಿನ ಭಕ್ತರು ಉಪವಾಸವನ್ನು ಆಚರಿಸಿ ಶಿವ, ಪಾರ್ವತಿ, ಗಣೇಶ, ಕಾರ್ತಿಕೇಯರಿಗೆ ಪೂಜೆ ಸಲ್ಲಿಸುತ್ತಾರೆ. ಏಕಚಿತ್ತದಿಂದ ಶಿವ ಧ್ಯಾನವನ್ನು ಮಾಡಿದರೆ ಸಂತೋಷ, ಮಾನಸಿಕ ಶಾಂತಿ ಸಿಗುವುದರೊಂದಿಗೆ ಪಾಪ ಕರ್ಮಗಳಿಂದ ಮುಕ್ತಿ ಲಭಿಸುತ್ತದೆ ಎಂಬುದು ನಂಬಿಕೆ. ಭಕ್ತರು ಶಿವಲಿಂಗಕ್ಕೆ ಅಭಿಷೇಕ ಮತ್ತು ರುದ್ರಾಭಿಷೇಕವನ್ನು ಮಾಡುತ್ತಾರೆ. ಈ ದಿನದಂದು ಖೀರ್ ನೈವೇದ್ಯವನ್ನು ಅರ್ಪಿಸುವುದು ಮಂಗಳಕರ ಎಂದು ನಂಬಲಾಗಿದೆ.
ಗುರು ಪ್ರದೋಷ ವ್ರತದ ಮಹತ್ವ;
ಈ ಉಪವಾಸವು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಬರುತ್ತದೆ. ಪ್ರದೋಷದ ಸಮಯ ಸೂರ್ಯಾಸ್ತಕ್ಕೆ ಸಂಬಂಧಿಸಿದಾಗಿದೆ. ಪ್ರದೋಷ ಎಂದರೆ ಸಂಜೆಯ ಮೊದಲ ಭಾಗ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ ರಾಕ್ಷಸರನ್ನು ಸಂಹರಿಸಲು ಎಲ್ಲಾ ದೇವತೆಗಳು ಪ್ರದೋಷದ ದಿನದಂದು ಶಿವನಿಂದ ಸಹಾಯವನ್ನು ಕೋರಿದರು ಎಂದು ನಂಬಲಾಗಿದೆ. ದೇವತೆಗಳೆಲ್ಲಾ ಪ್ರದೋಷದ ಸಂಜೆ ಕೈಲಾಸ ಪರ್ವತಕ್ಕೆ ಹೋಗಿ ಶಿವನ ಸಹಾಯಯಾಚಿಸಿದ್ದರು. ಇವರಿಗೆ ಸಹಾಯ ಮಾಡಲು ಶಿವ ದೇವರು ಕೂಡಾ ಒಪ್ಪಿದ್ದರು ಎಂಬುದು ನಂಬಿಕೆ. ಶಿವ ಭಕ್ತರಿಗೆ ಇದು ಮಹತ್ವದ ದಿನ. ಇದೇ ಕಾರಣದಿಂದ ಶಿವ ಪರಿವಾರದ ಆಶೀರ್ವಾದವನ್ನು ಪಡೆಯಲು ಪ್ರದೋಷದ ದಿನದಂದು ಉಪವಾಸವನ್ನು ಆಚರಿಸಲಾಗುತ್ತದೆ. ಅಂತೆಯೇ, ಈ ಬಾರಿ ಗುರುವಾರ ಪ್ರದೋಷ ವ್ರತ ಬಂದಿರುವುದರಿಂದ ಗುರು ಗ್ರಹದ ಆಶೀರ್ವಾದ ಕೂಡಾ ಭಕ್ತರ ಮೇಲಿರುತ್ತದೆ ಎಂಬುದು ನಂಬಿಕೆ. ಸ್ಕಂದ ಪುರಾಣದ ಪ್ರಕಾರ ಪ್ರದೋಷ ದಿನದಂದು ಎರಡು ರೀತಿಯ ಉಪವಾಸವನ್ನು ಆಚರಿಸಲಾಗುತ್ತದೆ. ಒಂದು ಹಗಲಿನಲ್ಲಿ ಮಾಡುವ ಉಪವಾಸ. ಈ ಉಪವಾಸವನ್ನು ರಾತ್ರಿ ಮುರಿಯಬಹುದು. ಇನ್ನೊಂದು ಕಟ್ಟುನಿಟ್ಟಿನ ಉಪವಾಸದ ಆಚರಣೆ. ಅಂದರೆ, ಇಲ್ಲಿ 24 ಗಂಟೆಗಳ ಕಾಲ ಭಕ್ತರು ಉಪವಾಸ ಆಚರಿಸಿ ಮರುದಿನ ಉಪವಾಸ ಮುರಿಯುತ್ತಾರೆ. ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರೂ ಈ ವ್ರತವನ್ನು ಆಚರಿಸಬಹುದು. ಈ ಮಂಗಳಕರ ದಿನದಂದು ಕೆಲವರು ಶಿವನ ನಟರಾಜನ ರೂಪವನ್ನು ಪೂಜಿಸುತ್ತಾರೆ ಎಂದು ನಂಬಲಾಗಿದೆ. ಸಮರ್ಪಣಾ ಭಾವದಿಂದ ಪೂಜೆಯನ್ನು ಮಾಡುವ ಭಕ್ತರಿಗೆ ಶಿವ ಮತ್ತು ಪಾರ್ವತಿ ದೇವಿಯು ಸಂತೋಷ, ದೀರ್ಘಾಯುಷ್ಯ, ಯಶಸ್ಸು, ಸಮೃದ್ಧಿ ಮತ್ತು ಎಲ್ಲಾ ಇಷ್ಟಾರ್ಥಗಳನ್ನು ಕರುಣಿಸುತ್ತಾರೆ ಎಂಬುದು ನಂಬಿಕೆ.
ಗುರು ಪ್ರದೋಷ ವ್ರತದ ಪೂಜಾ ವಿಧಿ;
ಭಕ್ತರು ಮುಂಜಾನೆ ಬೇಗ ಎದ್ದು ಪವಿತ್ರ ಸ್ನಾನ ಮಾಡಬೇಕು. ಆ ಬಳಿಕ ವ್ರತದ ಆಚರಣೆಗಳನ್ನು ಆರಂಭಿಸುತ್ತಾರೆ.
ಶಿವ ಪರಿವಾರ ಎಂದರೆ ಪರಮೇಶ್ವರ, ಪಾರ್ವತಿ ದೇವಿ, ಗಣೇಶ ಮತ್ತು ಕಾರ್ತಿಕೇಯ ಹಾಗೂ ನಂದಿಯ ವಿಗ್ರಹವನ್ನು ಒಟ್ಟಾಗಿ ಇರಿಸಿ ಭಕ್ತರು ಈ ದಿನ ಪೂಜೆ ಸಲ್ಲಿಸುತ್ತಾರೆ.
ದೇಸಿ ತುಪ್ಪದಿಂದ ದೇವರಿಗೆ ದೀಪ ಹಚ್ಚಿ. ಜತೆಗೆ, ಮಲ್ಲಿಗೆ ಮತ್ತು ಗುಲಾಬಿ ಹೂವುಗಳನ್ನು ಅಥವಾ ಮಾಲೆಯನ್ನು ದೇವರಿಗೆ ಅರ್ಪಿಸಿ. ಇದು ಶಿವ ಮತ್ತು ಪಾರ್ವತಿ ದೇವಿಯ ನೆಚ್ಚಿನ ಹೂವುಗಳು. ಇದರ ಜತೆಗೆ ಯಾವುದೇ ಬಿಳಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸಿ.
ಬಿಲ್ವ ಪತ್ರೆ ಶಿವ ದೇವರಿಗೆ ಬಲು ಪ್ರಿಯ. ಹೀಗಾಗಿ, ಈ ದಿನ ಪೂಜೆಯ ವೇಳೆ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸುವುದು ಮಂಗಳಕರ.
ಈ ಮಂಗಳಕರ ದಿನದಂದು ಪ್ರದೋಷ ವ್ರತ ಕಥಾ, ಶಿವ ಚಾಲೀಸಾ ಮತ್ತು ಭಗವಾನ್ ಶಿವ ಆರತಿಯನ್ನು ಪಠಿಸಿ.
ಈ ಪವಿತ್ರ ದಿನದಂದು ಭಕ್ತರು ದೇವಾಲಯಕ್ಕೆ ಭೇಟಿ ನೀಡಬೇಕು. ಜತೆಗೆ ಶಿವ ಮತ್ತು ಪಾರ್ವತಿ ದೇವಿಗೆ ಪೂಜೆ ಮತ್ತು ಪಂಚಾಮೃತ (ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಮತ್ತು ತುಪ್ಪ)ದ ಅಭಿಷೇಕವನ್ನು ಮಾಡಬೇಕುಅಭಿಷೇಕವನ್ನು ಮಾಡುವಾಗ ಭಕ್ತರು `ಓಂ ನಮಃ ಶಿವಾಯ’ ಎಂದು ಜಪಿಸಬೇಕು.
ಪ್ರದೋಷದ ದಿನದಂದು ಭಕ್ತರು ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಬೇಕು.
ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಲು ಸಾಧ್ಯವಾಗದ ಭಕ್ತರು ರಾತ್ರಿಯಲ್ಲಿ ಶಿವ ಮತ್ತು ಪಾರ್ವತಿ ದೇವಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ಉಪವಾಸವನ್ನು ಮುರಿಯಬಹುದು. ಜತೆಗೆ, ಬೆಳ್ಳುಳ್ಳಿ ಮತ್ತು ಈರುಳ್ಳಿ ಇಲ್ಲದೆ ಸಾತ್ವಿಕ ಭೋಜನವನ್ನು ಸವಿಯಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಗುರು ಪ್ರದೋಷ ವ್ರತದ ಪರಿಹಾರಗಳು;
ಪ್ರದೋಷದ ದಿನ ಅವಿವಾಹಿತೆಯರು ಉಪವಾಸವನ್ನು ಆಚರಿಸುತ್ತಾರೆ ಮತ್ತು ದೇವಿ ಪಾರ್ವತಿಗೆ ಶೃಂಗಾರವನ್ನು ಅರ್ಪಿಸುತ್ತಾರೆ. ಇದರೊಂದಿಗೆ ಬಯಸಿದ ಪತಿಯನ್ನು ಪಡೆಯಲು ಗುರು ಪ್ರದೋಷ ದಿನದಂದು ಗುರು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.