ಬೆಂಗಳೂರು: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎನ್ನಲಾಗಿದೆ. ಕಲಾಪ ವ್ಯವಹಾರಗಳ ಸಲಹಾ ಸಮಿತಿಯ ನಿರ್ಣಯದಂತೆ ‘ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ಹಾಗಾದ್ರೇ ಯಾರಿಗೆ ಎಷ್ಟು ವೇತನ ಹೆಚ್ಚಾಗಲಿದೆ ಎನ್ನುವುದನ್ನು ನೋಡುವುದಾದರೆ ಅದರ ವಿವರ ಹೀಗಿದೆ: ಶಾಸಕರ ವೇತನ ₹ 40 ಸಾವಿರದಿಂದ ₹ 80 ಸಾವಿರ, ವಿಧಾನಸಭಾಧ್ಯಕ್ಷ, ಸಚಿವರ ವೇತನ ₹ 60 ಸಾವಿರದಿಂದ ₹ 1.25 ಲಕ್ಷ, ವಿಧಾನ ಪರಿಷತ್ ಸಭಾಪತಿ ವೇತನ ₹ 75 ಸಾವಿರದಿಂದ ₹ 1.25 ಲಕ್ಷ, ಮುಖ್ಯಮಂತ್ರಿಯ ವೇತನ ₹ 75 ಸಾವಿರದಿಂದ ₹ 1.50 ಲಕ್ಷವನ್ನು ಪಡೆದುಕೊಳ್ಳಲಿದ್ದಾರೆ.