ಬೆಂಗಳೂರು : ಬೆಂಗಳೂರು ಇಂಟರ್ನ್ಯಾಷನಲ್ ಸಿಟಿ ಆಗಿರುವದರಿಂದ ರಾತ್ರಿಯ ವೇಳೆಯೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲಸ ಮಾಡುವವರು ಇರುತ್ತಾರೆ ಹಾಗಾಗಿ ರಾತ್ರಿ ಒಂದು ಗಂಟೆಯವರೆಗೂ ಸಬ್ ಓಪನ್ ಮಾಡಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಚ್ಎಸ್ ಗೋಪಿನಾಥ್ ಅವರು ಪ್ರಶ್ನಿಸಿದಾಗ, ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಇಂದು ಪರಿಷತ್ ನಲ್ಲಿ ಎಚ್ಎಸ್ ಗೋಪಿನಾಥ ಅವರು ಬೆಂಗಳೂರಿನಲ್ಲಿ ರಾತ್ರಿ ಒಂದು ಗಂಟೆವರೆಗೆ ಓಪನ್ ಮಾಡುವ ಕುರಿತು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಡಿಕೆ ಶಿವಕುಮಾರ್ ಬೆಂಗಳೂರು ಇಂಟರ್ನ್ಯಾಷನಲ್ ಸಿಟಿ. ಇಲ್ಲಿ ರಾತ್ರಿ ಸಮಯವು ಕೆಲಸ ಮಾಡುವವರು ಇರುತ್ತಾರೆ. ಹೀಗಾಗಿ ಬೆಂಗಳೂರಿ ನಗರವನ್ನು ಅಲೈವ್ ಇಡಬೇಕಾಗುತ್ತದೆ. ಗೃಹ ಸಚಿವರು ಅಬಕಾರಿ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ. ಕುಳಿತು ಚರ್ಚೆ ಮಾಡಿ ಈ ಬಗ್ಗೆ ನಿರ್ಣಯ ಮಾಡುತ್ತೇವೆ.ಸದಸ್ಯ ಹೆಚ್ ಎಸ್.ಗೋಪಿನಾಥ್ ಬೇಡಿಕೆಯಲ್ಲಿ ಅರ್ಥವಿದೆ. ರಾತ್ರಿ 1 ಗಂಟೆವರೆಗೆ ಪಬ್ ಓಪನ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ವಿಧಾನ ಪರಿಷತ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.