ದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ನಿಮ್ಮನಪಲ್ಲೆ ಮಂಡಲದಲ್ಲಿ ಹಾಲಿನ ಡಿಪೋದಿಂದ ಹಾಲು ತೆಗೆದುಕೊಂಡು ಹಿಂತಿರುಗುತ್ತಿದ್ದ ಹುಡುಗಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಯುವತಿಯನ್ನು ಉಸಿರುಗಟ್ಟಿಸಿ ಅತ್ಯಾಚಾರ ಮಾಡಿ ಬಾಯಿ ಮುಚ್ಚಿದರು. ನಂತರ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಯುವತಿ ವಿಡಿಯೋವೊಂದರಲ್ಲಿ ಮಾತನಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನಾಗೇಂದ್ರ ಮತ್ತು ಸುರೇಂದ್ರ ಎಂದು ಯುವತಿ ಗುರುತಿಸಿದ್ದಾಳೆ.
ಪ್ರಕರಣ ದಾಖಲಿಸಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
మహిళ పై ఇద్దరు యువకులు అత్యాచారం
అన్నమయ్య నిమ్మనపల్లె మండలంలో పాల డిపోకు పాలు పోసి వస్తుండగా దారుణానికి పాల్పడ్డ ఇద్దరు యువకులు. ఆలస్యంగా వెలుగులోకి వచ్చిన ఘటన. నిందితుల కోసం గాలిస్తున్న పోలీసులు. pic.twitter.com/MEblu3iKY7
— ChotaNews App (@ChotaNewsApp) March 8, 2025








