ಬೆಂಗಳೂರು: ರಾಜ್ಯದಲ್ಲಿ ಇಂದು ಎರಡನೇ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇಂದಿನ ಪರೀಕ್ಷೆಗೆ 5.26 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೇ, 12,533 ಮಂದಿ ಗೈರು ಆಗಿದ್ದಾರೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಇಂದು ದ್ವಿತೀಯ ಪಿಯುಸಿ ಗಣಿತ, ಶಿಕ್ಷಣ, ಲಾಜಿಕ್ ಮತ್ತು ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಗೆ 5,39,479 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂಬುದಾಗಿ ತಿಳಿಸಿದೆ.
ಇಂದು ನಡೆದಂತ ದ್ವಿತೀಯ ಪಿಯುಸಿ ಎರಡನೇ ದಿನದ ಪರೀಕ್ಷೆಗೆ 5,26,946 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 12,533 ವಿದ್ಯಾರ್ಥಿಗಳು ಗೈರು ಹಾಜರಿದ್ದಾರೆ. ಇಂದಿನ ಪರೀಕ್ಷೆಯ ಹಾಜರಾತಿ ಪ್ರಮಾಣ ಶೇ.97.68 ಆಗಿದೆ. ಯಾವುದೇ ಪರೀಕ್ಷಾ ಅಕ್ರಮವಾಗಲೀ, ಡಿಬಾರ್ ಆಗಲಿ ನಡೆದಿಲ್ಲ ಎಂಬುದಾಗಿ ತಿಳಿಸಿದೆ.
BREAKING: ರಾಜ್ಯದಲ್ಲಿ ಹಕ್ಕಿ ಜ್ವರ ಹಿನ್ನಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ, ಈ ನಿಯಮಗಳ ಪಾಲನೆ ಕಡ್ಡಾಯ
BREAKING : ಪತ್ನಿಯ ಕಾಟಕ್ಕೆ ಮತ್ತೊಂದು ಬಲಿ : ಕಲಬುರ್ಗಿಯಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಶರಣು!