ಚಿಕ್ಕಬಳ್ಳಾಪುರ : ಒಡವೆ ಅಡವಿಟ್ಟುಕೊಂಡು ಮಾವನಿಗೆ ಅಳಿಯ ಸಾಲ ನೀಡಿದ್ದ, ಆದರೆ ಸಾಲ ಹಿಂದಿರುಗಿಸಲು ವಿಳಂಬವಾಗಿದ್ದಕ್ಕೆ ಮಾವನಾಗೆ ಕಲ್ಲಿನಿಂದ ಹೊಡೆದು ಆತನ ಮೇಲೆ ಕಾರು ಹತ್ತಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ, ಮಾವ ಶ್ರೀನಿವಾಸನನ್ನು ಹತ್ಯೆಗೈದಿದ್ದ ಅಳಿಯ ಬಾಲಕೃಷ್ಣ ಅರೆಸ್ಟ್ ಆಗಿದ್ದಾನೆ.
ಹೌದು ಕೊಲೆಯಾದ ಶ್ರೀನಿವಾಸ್ ಮಗಳನ್ನ ಬಾಲಕೃಷ್ಣ ಮದುವೆಯಾಗಿದ್ದ. ಪತ್ನಿಯ ಒಡವೆ ಅಡವಿಟ್ಟು 4. 50 ಲಕ್ಷ ಸಾಲ ನೀಡಿದ್ದ.ಕೊಲೆಯಾದ ಶ್ರೀನಿವಾಸಗೆ ಆರೋಪಿ ಬಾಲಕೃಷ್ಣ ಸಾಲ ನೀಡಿದ್ದ. ಸಾಲ ಹಿಂದಿರುಗಿಸದ ಕಾರಣ ಒಡವೆ ಬಿಡಿಸಿಕೊಳ್ಳಲು ಆಗಿರಲಿಲ್ಲ. ಪತ್ನಿ ಹರ್ಷಿತಾಗೆ ಗೊತ್ತಾಗದೆ ಮಾವನಿಗೆ ಆರೋಪಿ ಹಣ ನೀಡಿದ್ದ.
ಇದೇ ವಿಚಾರಕ್ಕೆ ಶ್ರೀನಿವಾಸ್ ಮತ್ತು ಬಾಲಕೃಷ್ಣ ನಡುವೆ ಜಗಳವಾಗಿತ್ತು. ಈ ವೇಳೆ ಕಲ್ಲಿನಿಂದ ಶ್ರೀನಿವಾಸ್ಗೆ ಬಾಲಕೃಷ್ಣ ಹೊಡೆದಿದ್ದ. ನೆಲಕ್ಕೆ ಬಿದ್ದ ಶ್ರೀನಿವಾಸ್ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದ. ಫೆಬ್ರವರಿ 28ರಂದು ಮಾವ ಶ್ರೀನಿವಾಸ್ನನ್ನು ಬಾಲಕೃಷ್ಣ ಕೊಲೆ ಮಾಡಿದ್ದ. ಇದೀಗ ಆರೋಪಿ ಆರೋಪಿ ಬಾಲಕೃಷ್ಣನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.