ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಗ್ಯಾರಂಟಿಗಳಿಗೆ ಎನ್ ಸಿ ಇ ಪಿ ಹಾಗೂ ಟಿಎಸ್ಪಿ ಅನುದಾನ ಬಳಕೆ ಆರೋಪದ ಹಿನ್ನಲೆಯಲ್ಲಿ ಮಾರ್ಚ್.5ರಂದು ಬೆಂಗಳೂರಲ್ಲಿ ಬಿಜೆಪಿಯಿಂದ ಪ್ರತಿಭಟನೆಗೆ ನಿರ್ಧರಿಸಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿಗೆ ಮೀಸಲಾಗಿರುವಂತ ಎನ್ ಸಿ ಇ ಪಿ ಹಾಗೂ ಟಿ ಎಸ್ ಪಿ ಅನುದಾನವನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದು ನಿಲ್ಲಿಸಬೇಕು ಎಂಬುದಾಗಿ ಬಿಜೆಪಿ ಆಗ್ರಹಿಸಿತ್ತು.
ಈ ಬೆನ್ನಲ್ಲೇ ನಾಳೆ ಎಸ್ಸಿ ಎಸ್ಟಿ ಸಮುದಾಯದವರಿಗಾಗಿ ಮೀಸಲಿಟ್ಟಿದ್ದಂತ ಅನುದಾನ ಬಳಕೆ ಮಾಡುತ್ತಿರುವ ಸಂಬಂಧ ನಾಳೆ ದಲಿತ ಸಂಘಟನೆಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದೆ.
ನಾಳಿನ ದಲಿತ ಸಂಘಟನೆಗಳ ಜೊತೆಗಿನ ಬಿಜೆಪಿ ಮುಖಂಡರ ಸಭೆಯಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಿದೆ. ಬೆಂಗಳೂರಿನ ಶಾಸಕರ ಭವನದಲ್ಲಿ ಈ ಸಭೆ ನಡೆಯಲಿದೆ. ಮಾರ್ಚ್.5ರಂದು ಬೆಂಗಳೂರಲ್ಲಿ ಯಾರ ರೀತಿಯಲ್ಲಿ ಹೋರಾಟ ನಡೆಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ.
BREAKING: ಮಾ.31ರ ನಂತರ ದೆಹಲಿಯಲ್ಲಿ 15 ಮೇಲ್ಪಟ್ಟ ಹಳೆಯ ವಾಹನಗಳಿಗೆ ಇಂಧನ ಇಲ್ಲ: ಸಚಿವ ಮಂಜಿಂದರ್ ಸಿರ್ಸಾ ಆದೇಶ
ಟ್ರಂಪ್ ಜೊತೆ ಮಾತಿನ ಚಕಮಕಿ:’ಜೆಲೆನ್ಸ್ಕಿ’ಗೆ ಯುರೋಪಿಯನ್ ಮಿತ್ರರಾಷ್ಟ್ರಗಳು, ಕೆನಡಾ ಬೆಂಬಲ | Trump-Zelensky