ಯಾದಗಿರಿ : ನಿವೃತ್ತ ನೌಕರರೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ 10 ಲಕ್ಷ ರು. ಕಳೆದುಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೆಬಿಜೆಎನ್ಎಲ್ ನಿವೃತ್ತ ನೌಕರರೊಬ್ಬರು ಡಿಜಿಟಲ್ ಸ್ಕ್ಯಾಮ್ ಗೆ ಒಳಗಾಗಿದ್ದಾರೆ. ಈ ಮೂಲಕ ಯಾದಗಿರಿ ಜಿಲ್ಲೆಯಲ್ಲಿ ಡಿಜಿಟಲ್ ಅರೆಸ್ಟ್ ಕುರಿತು ಮೊದಲ ಪ್ರಕರಣ ದಾಖಲಾದಂತಾಗಿದೆ.
ಏನಿದು ಪ್ರಕರಣ…?
ಜನವರಿ 26 ರಂದು ಕಲಬುರಗಿಯಲ್ಲಿ ತಮ್ಮ ಸಹೋದರಿಯ ಮನೆಯಲ್ಲಿದ್ದಾಗ ಮಧ್ಯಾಹ್ನ ಸುಮಾರು 12:30 ಗಂಟೆಗೆ ಅಪಚಿತ ವ್ಯಕ್ತಿಯಿಂದ ವಿಡಿಯೊ ಕಾಲ್ ಕರೆ ಬಂದಿದೆ. ಹಿಂದಿ ಭಾಷೆಯಲ್ಲಿ ಮಾತನಾಡಿ ನಾವು ಮುಂಬೈ ಕ್ರೈಂ ಬ್ರಾಂಚ್‌ನ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ದಾಖಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗಳು ಮನಿ ಲಾಂಡರಿಂಗ್‌ಗೆ ಬಳಕೆ ಆಗುತ್ತಿದೆ. ಎಫ್‌ಐಆರ್ ದಾಖಲಾಗಿದೆ ಎಂದು ಸುಳ್ಳು. ಹೇಳಿ ಭಯ ಹುಟ್ಟಿಸಿದ್ದಾರೆ.
ಮುಖ್ಯ ಆರೋಪಿ ನರೇಶ್ ಗೋಯಲ್‌ನೊಂದಿಗೆ ನೀವೂ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯವಿದೆ ಎಂದು ಹೆದರಿಸಿದ್ದಾರೆ. ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಪಾಸ್‌ಬುಕ್ ಇತ್ಯಾದಿ ಮಾಹಿತಿಗಳನ್ನು ಕಳಿಸಿರುವಂತೆ ತಿಳಿಸಿದರಿಂದ ನಿವೃತ್ತ ನೌಕರರು ಎಲ್ಲ ಮಾಹಿತಿಯನ್ನು ವಾಟ್ಸ್ಆ್ಯಪ್ ಮುಖಾಂತರ ಅವರಿಗೆ ಕಳಿಸಿದ್ದಾರೆ ಎಂದು ಎಸ್ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.