ತೆಲಂಗಾಣ : ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತು ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಹುಟ್ಟಿನಿಂದ ಹಿಂದುಳಿದ ವರ್ಗದವರು ಅಲ್ಲ ಆದರೂ ಮೋದಿ ತಾವು ಓಬಿಸಿ ವರ್ಗದವರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿವಾದಿತ ಹೇಳಿಕೆ ನೀಡಿದರು.
ಮೋದಿ ಸಿಎಂ ಆಗುವ ಮುನ್ನ ಉನ್ನತ ಜಾತಿಯವರಾಗಿದ್ದರು. ವಾಸ್ತವಿಕವಾಗಿ ಪ್ರಧಾನಿ ನರೇಂದ್ರ ಮೋದಿ ಓಬಿಸಿ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಪರಿವರ್ತಿತ ಹಿಂದುಳಿದ ವರ್ಗದವರಾಗಿದ್ದಾರೆ. ಹುಟ್ಟಿನಿಂದಲೇ ನರೇಂದ್ರ ಮೋದಿ ಉನ್ನತ ಜಾತಿಗೆ ಸೇರಿದವರಾಗಿದ್ದಾರೆ.ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಉನ್ನತ ಜಾತಿಯಲ್ಲಿದ್ದವರು. 2001ರಲ್ಲಿ ಸಿಎಂ ಆದ ಬಳಿಕ ಅವರ ಜಾತಿಯನ್ನು ಒಬಿಸಿಗೆ ಸೇರಿಸಿದರು ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.