ಕಲಬುರ್ಗಿ : ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 45.50 ಲಕ್ಷ ರೂ. ಮೌಲ್ಯದ 40 ಕೆಜಿ ಗಾಂಜಾವನ್ನು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಲಕ್ಷ್ಮಣ್ ನಾಯಕ ತಾಂಡ ನಿವಾಸಿ ಚಂದ್ರಕಾಂತ ಪಪ್ಪು ಹರಿಶ್ಚಂದ್ರ ಚವ್ಹಾಣ್ (40), ಕೊಡ್ಲಿ ಗ್ರಾಮದ ಮಲ್ಲಯ್ಯ ಮಹಾಬಲೇಶ್ವರ ಪ್ಯಾಟಿನಮನಿ ಎಂದು ತಿಳಿಬಂದಿದೆ.ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು ತಾಲೂಕಿನ ಕೊಡ್ಲಿ ಗ್ರಾಮಕ್ಕೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡದ ಹತ್ತಿರ ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದರ ಕುರಿತು ಖಚಿತ ಮಾಹಿತಿಯನ್ನು ಪಡೆದ ಪೊಲೀಸರು, ದಾಳಿ ಮಾಡಿದ್ದಾರೆ. ದಾಳಿಯ ವೇಳೆ 40 ಲಕ್ಷ ಮೌಲ್ಯದ ಗಾಂಜಾ, ಒಂದು ಕಾರು, ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.