ಮುಂಬೈ: ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲೇಟೆಂಟ್’ ಬಗ್ಗೆ ಪಾಡ್ಕಾಸ್ಟರ್ ರಣವೀರ್ ಅಲ್ಲಾಬಾಡಿಯಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿವಾದದ ಮಧ್ಯೆ ಮಹಾರಾಷ್ಟ್ರ ಸೈಬರ್ ಸೆಲ್ ಈ ವಾರ ಎರಡನೇ ಬಾರಿಗೆ ಸಮಯ್ ರೈನಾ ಅವರಿಗೆ ಸಮನ್ಸ್ ನೀಡಿದೆ.
ಮಾರ್ಚ್ 17 ರಂದು ಅಮೆರಿಕದಿಂದ ಮರಳುವುದಾಗಿ ತಿಳಿಸಿದ ರೈನಾ, ಸಮನ್ಸ್ಗೆ ಪ್ರತಿಕ್ರಿಯಿಸಲು ಹೆಚ್ಚಿನ ಸಮಯವನ್ನು ಕೋರಿದ್ದಾರೆ.