ರಾಯಚೂರು : ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆ ಎಂದು ಪೋಷಕರಿಗೆ ತಿಳಿಸಿ ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಕಲಬುರಗಿ ಮೂಲದ MS ವಿದ್ಯಾರ್ಥಿನಿ ಡಾ.ಭಾಗ್ಯಲಕ್ಷ್ಮಿ ಕಾಣೆಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈಕೆ ಕಳೆದ 15 ದಿನಗಳ ಹಿಂದೆ ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಳು.
ಭಾಗ್ಯಲಕ್ಷ್ಮಿ ಸ್ನೇಹಿತರ ಮನೆ ಹೋಗುವುದಾಗಿ ಹೇಳಿ ತೆರಳಿದ್ದು, ಮರಳಿ ಬಂದಿಲ್ಲ. ಮಗಳ ಪೋನ್ ಸ್ವಿಚ್ ಆಫ್ ಆಗಿದಕ್ಕೆ ಆತಂಕಗೊಂಡ ಪೋಷಕರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.