ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ವಾದಂತಹ ಅಪಘಾತ ಸಂಭವಿಸಿದ್ದು, ಕಾಂಕ್ರೀಟ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲೇ ಸಾವನ್ನುಪ್ಪಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಒಂದು ಘಟನೆ ನಡೆದಿದೆ.
ಹೌದು ಕಾಂಕ್ರೀಟ್ ಮಿಕ್ಸರ್ ಲಾರಿ ಹಾಗೂ ಬೈಕ್ ನಡುವೆ ಭೀಕರವಾದ ಅಪಘಾತ ಸಂಭವಿಸಿದೆ ಡಿಕ್ಕಿ ರಬಸಕ್ಕೆ ಸ್ಥಳದಲ್ಲೇ ದಂಪತಿಗಳು ಉಸಿರು ಚೆಲ್ಲಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಒಂದು ಅಪಘಾತ ಸಂಭವಿಸಿದೆ.ಮೃತ ದಂಪತಿಗಳನ್ನು ಆಸಿಫ್ ಅಹಮದ್ ಹಾಗೂ ಶಬಾನಾ ಬೇಗಂ ಎಂದು ತಿಳಿದುಬಂದಿದೆ. ಟ್ಯಾನರಿ ರಸ್ತೆಯಿಂದ ಬೈಕ್ ನಲ್ಲಿ ದಂಪತಿಗಳು ದರ್ಗಾಕೆ ತೆರಳುತ್ತಿದ್ದರು.
ಈ ವೇಳೆ ಕಾಂಕ್ರೀಟ್ ಮಿಕ್ಸರ್ ಲಾರಿ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕೂಡಲೇ ಲಾರಿ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.