ಕಲಬುರ್ಗಿ : ಸಿಗ್ನಲ್ ದಾಟುವಾಗ ಎಲೆಕ್ಟ್ರಿಕ್ ಬೈಕ್ ಗೆ ಲಾರಿ ಢಿಕ್ಕಿ ಹೊಡೆದು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಕಲಬುರ್ಗಿ ನಗರದ ಹೊರವಲಯದ ಹಾಗರಗಾ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ನಗರದ ನೂರಾನಿ ಮೊಹಲ್ಲಾದ ನಿವಾಸಿ ಅಬ್ದುಲ್ ನಬಿ (65) ಎಂದು ತಿಳಿದುಬಂದಿದೆ.ಕಟಲರಿ ವ್ಯಾಪಾರಿಯಾಗಿದ್ದು, ಇವರು ಅಂಗಡಿಯ ಸಾಮಾನುಗಳನ್ನು ತೆಗೆದುಕೊಂಡು ಹಾಗರಗಾ ಕ್ರಾಸ್ ನಲ್ಲಿ ಸಿಗ್ನಲ್ ದಾಟುವಾಗ ಅಪಘಾತ ಸಂಭವಿಸಿದೆ.ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.