ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಬೆಂಗಳೂರು ಮೆಟ್ರೊ ದರ 46% ವರೆಗೂ ಏರಿಕೆಯಾಗಲಿದ್ದು, ಭಾನುವಾರದಿಂದಲೇ ಅಧಿಕೃತವಾಗಿ ಜಾರಿಯಾಗುವ ಸಾಧ್ಯತೆಯಿದೆ.
ಹೌದು ಈಗಾಗಲೇ ಬಸ್ ಟಿಕೆಟ್ ದರ ಏರಿಕೆ ಮಾಡಿರುವ ಸರ್ಕಾರ ಇದೀಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ನಾಳೆಯಿಂದಲೇ ಟಿಕೆಟ್ ದರ ಏರಿಕೆ ಮಾಡಿ ಬಿಎಂಆರ್‌ಸಿಎಲ್ ಅಧಿಕೃತ ಆದೇಶ ಹೊರಡಿಸಿದೆ. ಗರಿಷ್ಠ 90 ರೂ., ಕನಿಷ್ಠ 10 ರೂ. ಏರಿಕೆಯಾಗಲಿದೆಂದು ಮೆಟ್ರೋ ಹಿರಿಯ ಅಧಿಕಾರಿಗಳಿಂದ ಇದೀಗ ಮಾಹಿತಿ ತಿಳಿದು ಬಂದಿದೆ ನಾಳೆ ಬೆಳಿಗ್ಗೆ 7:00ಯಿಂದಲೇ ಪರಿಷ್ಕೃತ ಜಾರಿಯಾಗುವ ಸಾಧ್ಯತೆ ಇದೆ.
ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.
0.2 ಕಿಲೋಮೀಟರ್ ಪ್ರಯಾಣಕ್ಕೆ 10 ರೂಪಾಯಿ ಏರಿಕೆ ಮಾಡಿದ್ದು ಇನ್ನೂ 2-4 ಕಿಲೋಮೀಟರ್ ಪ್ರಯಾಣಕ್ಕೆ 20 ರೂಪಾಯಿಯನ್ನು ಏರಿಕೆ ಮಾಡಲಾಗಿದೆ. 4-6 ಕಿಲೋಮೀಟರ್ ಪ್ರಯಾಣಕ್ಕೆ ರೂ.30 ಏರಿಕೆ ಮಾಡಿದ್ದು, 6-8 ಕಿಲೋಮೀಟರ್ ಪ್ರಯಾಣಕ್ಕೆ ರೂ.40 ಏರಿಕೆ ಮಾಡಲಾಗಿದ್ದು, 8-10 ಕಿಲೋಮೀಟರ್ ಗೆ ಪ್ರಯಾಣಕ್ಕೆ ರೂ.50 ಏರಿಕೆ ಮಾಡಲಾಗಿದೆ.
10-15 ಕಿಲೋ ಮೀಟರ್ ಪ್ರಯಾಣಕ್ಕೆ 60 ರೂಪಾಯಿ ಏರಿಕೆ ಮಾಡಿದ್ದು, 15 ರಿಂದ 20 ಕಿಲೋಮೀಟರ್ ಪ್ರಯಾಣಕ್ಕೆ 70 ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು 20ರಿಂದ 25 ಕಿ.ಮೀ ಪ್ರಯಾಣಿಕೆ 80 ಏರಿಕೆ ಮಾಡಲಾಗಿದೆ.ಹಾಗಾಗಿ ನಾಳೆಯಿಂದಲೇ ಮೆಟ್ರೋ ಪ್ರಯಾಣದ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದು, ಟಿಕೆಟ್ ದರ ಹೆಚ್ಚಿಸಿ ಬಿಎಮ್ಆರ್‌ಸಿಎಲ್ ಇದೀಗ ಅಧಿಕೃತ ಆದೇಶ ಹೊರಡಿಸಿದೆ.