ಬೆಂಗಳೂರು: ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದೀರಿ. ಆ ಸುಳ್ಳಿನಿಂದ ಈಗ ನೀವು ಜನರೆದುರು ಬೆತ್ತಲಾಗಿದ್ದೀರಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್ ಪಕ್ಷವು, ಮುಡಾದಲ್ಲಿ ಮುಕ್ಕಿ ತಿಂದಿರುವ ಮಜಾವಾದಿಯ ಸುಳ್ಳುಗಳು ಬಗೆದಷ್ಟು ಹೊರಬರುತ್ತಲೇ ಇದೆ. ಸಿದ್ಧರಾಮಯ್ಯ ಅವರೇ, ನೀವೇ ಹೇಳಿಕೊಂಡಂತೆ, ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದೀರಿ. ಆ ಸುಳ್ಳಿನಿಂದ ಈಗ ನೀವು ಜನರೆದುರು ಬೆತ್ತಲಾಗಿದ್ದೀರಿ ಎಂದಿದೆ.
ದೇವನೂರು 3ನೇ ಹಂತದ ಬಡಾವಣೆಯಲ್ಲಿ ಈಗಲೂ ಇನ್ನೂ 370 ನಿವೇಶನಗಳು ಬಾಕಿ ಇದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ( 28-01-2025) ರಂದು ಮಾಹಿತಿ ನೀಡಿದೆ. ತಾವು ರಾಜಕೀಯ ಪ್ರಭಾವ ಬೀರಿ ದೇವನೂರು ಬಡಾವಣೆ ಬದಲಿಗೆ, ಅಭಿವೃದ್ಧಿ ಹೊಂದಿದ ವಿಜಯನಗರ ಬಡಾವಣೆಯಲ್ಲಿ 14 ನಿವೇಶನಗಳನ್ನು ಪಡೆದುಕೊಂಡಿದ್ದೀರಿ ಎಂಬುದು ಸತ್ಯವಾಗಿದೆ ಎಂದು ಹೇಳಿದೆ.
ರಾತ್ರೋರಾತ್ರಿ ಟಾರ್ಚ್ ಬೆಳಕಿನಲ್ಲಿ ವೈಟ್ನರ್ ಹೆಚ್ಚಿದ್ದು ಮಹಾ ಅಪರಾಧ ಕೃತ್ಯ. ವೈಟ್ನರ್ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕಪೋಲಕಲ್ಪಿತ ಕಟ್ಟುಕತೆಗಳ ಸುಳ್ಳು ಮರೆಮಾಚಲು ಮತ್ತೊಂದು ಸುಳ್ಳು ಹೇಳುತ್ತಾ ವಿವೇಕ ಶೂನ್ಯರಾಗಿ ಈಗ ನಾಡಿನ ಜನರ ಮುಂದೆ ಬೆತ್ತಲಾಗಿದ್ದೀರಿ. ಇನ್ನಾದರೂ ನಿಮ್ಮ ಮೊಂಡುತನ, ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂಬುದಾಗಿ ಆಗ್ರಹಿಸಿದೆ.
ಮುಡಾದಲ್ಲಿ ಮುಕ್ಕಿ ತಿಂದಿರುವ ಮಜಾವಾದಿಯ ಸುಳ್ಳುಗಳು ಬಗೆದಷ್ಟು ಹೊರಬರುತ್ತಲೇ ಇದೆ. @siddaramaiah ಅವರೇ, ನೀವೇ ಹೇಳಿಕೊಂಡಂತೆ,
ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ… pic.twitter.com/aAq29EGVTp
— Janata Dal Secular (@JanataDal_S) January 31, 2025
ಮಹಾ ಕುಂಭದ ‘ವೈರಲ್ ಗರ್ಲ್ ಮೊನಾಲಿಸಾ’ ಈ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ | Maha Kumbh’s viral girl Monalisa
BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!