ದಾವಣಗೆರೆ : ಕಿಡಿಗೇಡಿಗಳ ಕೃತ್ಯಕ್ಕೆ ಇದೀಗ 2200 ಅಡಕೆ ಗಿಡಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆ ತಾಲೂಕಿನ ತಮಿಳೇನಹಳ್ಳಿ ಕಿಡಿಗೇಡಿಗಳು ಈ ಒಂದು ಕೃತ್ಯ ಎಸಗಿದ್ದಾರೆ.
ಹೌದು ದಾವಣಗೆರೆ ಜಿಲ್ಲೆಯ ತಮಲೇನಹಳ್ಳಿ ಈ ಒಂದು ಘಟನೆ ನಡೆದಿದೆ. ರೈತ ಈರಪ್ಪ ಅವರ ಮೂರು ಎಕರೆ ಅಡಕೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಎರಡು ವರ್ಷಗಳಿಂದ 6 ಲಕ್ಷ ಖರ್ಚು ಮಾಡಿ ಅಡಿಕೆ ಬೆಳೆ ಬೆಳೆದಿದ್ದರು. ನೆನ್ನೆ ತೋಟದಲ್ಲಿ ಕಳೆ ತೆಗೆದು ಈರಪ್ಪ ದಂಪತಿ ಮನೆಗೆ ತೆರಳಿದ್ದರು.
ಈ ವೇಳೆ ಕಿಡಿಗೇಡಿಗಳು ಒಣ ಬೆಳೆಗಳಿಗೆ ಬೆಂಕಿ ಹಚ್ಚಿದ್ದು, ಇಡಿ ತೋಟಕ್ಕೆ ಬೆಂಕಿ ಆವರಿಸಿದೆ. ಕಿಡಿಗೇಡಿಗಳ ಕೃತಕ್ಕೆ 2200 ಅಡಿಕೆ ಮರಗಳು ಸುಟ್ಟು ಭಸ್ಮವಾಗಿವೆ. ಕಿಡಿಗೇಡಿಗಳ ಕೃತ್ಯಕ್ಕೆ ಇದೀಗ ರೈತ ಈರಪ್ಪ ಕಂಗಾಲಾಗಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಯಾರು ಈ ಕೃತ್ಯ ಎಸಗಿದ್ದು, ಎನ್ನುವುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.