ಚಿಕ್ಕಮಗಳೂರು : ನಾನು ಮೈಕ್ರೋ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಎಂದು ಹೇಳಿ ಮಹಿಳೆಯ ಬಲಿ ಲಕ್ಷ ಲಕ್ಷ ಹಣವನ್ನು ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಿಕ್ಕಮಂಗಳೂರು ನಗರ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೋಷ್ ನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ.
ಹೌದು ಮೈಕ್ರೋ ಫೈನಾನ್ಸ್ ಕಂಪನಿ ಮ್ಯಾನೇಜರ್ ಎಂದು ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಗೆ ವಂಚನೆ ಮಾಡಿದ್ದ ಆರೋಪಿ ಸಂತೋಷನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಮಂಗಳೂರು ನಗರ ಠಾಣೆಯ ಪೊಲೀಸರಿಂದ ಆರೋಪಿ ಸಂತೋಷನ್ನು ಇದೀಗ ಬಂಧಿಸಲಾಗಿದೆ. ಲೋನ್ ಕೊಡಿಸುವುದಾಗಿ ಹೇಳಿ ಸಂತೋಷ ಮತ್ತು ಗ್ಯಾಂಗ್ ವಂಚನೆ ಎಸಗಿತ್ತು.ಲಕ್ಷ ಲಕ್ಷ ಹಣ ಪೀಕಿ ಗ್ಯಾಂಗ್ ಪರಾರಿಯಾಗಿತ್ತು. ಇದೀಗ ಚಿಕ್ಕಮಂಗಳೂರು ಪೊಲೀಸರು ಇದೀಗ ಸಂತೋಷ್ ನನ್ನು ಅರೆಸ್ಟ್ ಮಾಡಿದೆ.
ಪ್ರಕರಣ ಹಿನ್ನೆಲೆ?
ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಎಂದು ನಾಲ್ಕು ಲಕ್ಷ ಹಣವನ್ನು ವಂಚಿಸಿದ್ದ ಹಳೆಯ ಲೋನ್ ಕ್ಲಿಯರ್ ಮಾಡಿದರೆ 10 ಲಕ್ಷ ಲೋನ್ ನೀಡುವುದಾಗಿ ಸಂತೋಷ್ ಮಹಿಳೆಗೆ ಭರವಸೆ ನೀಡಿದ್ದ.ಸಂತೋಷ್ ಮಾತನ್ನು ನಂಬಿ ಮಹಿಳೆ ನಾಲ್ಕು ಲಕ್ಷ ರೂಪಾಯಿಯನ್ನು ನೀಡಿದ್ದಳು. ಮೈಕ್ರೋ ಫೈನಾನ್ಸ್ ಸಾಲ ಕ್ಲಿಯರ್ ಮಾಡದೇ ಮಹಿಳೆಗೆ ಸಂತೋಷ್ ವಂಚನೆ ಎಸಗಿದ್ದಾನೆ. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಉಳಿದ ಆರೋಪಿಗಳಿಗೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ.