ಶಿವಮೊಗ್ಗ : ಎಂಸಿಎ ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಗರ್ಭಿಣಿ, ತೀವ್ರ ರಕ್ತಸ್ರಾವದಿಂದ ಸಾವನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಣಿ ಸಾವನ್ನಪ್ಪಿದ್ದಾಳೆ. ಬರತಟ್ಟಿಯ ಒಂದುವರೆ ತಿಂಗಳ ಗರ್ಭಿಣಿ ಅಶ್ವಿನಿ (28) ಸಾವನ್ನಪ್ಪಿದ್ದಾಳೆ. ಶಿವಮೊಗ್ಗ ಹೊಸನಗರ ತಾಲೂಕಿನ ದಬರತಟ್ಟಿ ಗ್ರಾಮದ ಅಶ್ವಿನಿ ಎಂದು ತಿಳಿದು ಬಂದಿದ್ದು, ಈಕೆ ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಳು ಎನ್ನಲಾಗಿದೆ.
ಕಳೆದ ಒಂದುವರೆ ವರ್ಷದ ಹಿಂದೆ ಅಶ್ವಿನಿಗೆ ಮದುವೆಯಾಗಿತ್ತು. ನಿನ್ನೆ ಸಾಗರ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿ ಅಶ್ವಿನಿ ದಾಖಲಾಗಿದ್ದಳು. ಅಶ್ವಿನಿಗೆ ಗರ್ಭಪಾತವಾದ ಹಿನ್ನೆಲೆಯಲ್ಲಿ ತೀವ್ರವಾಗಿ ರಕ್ತಸ್ರಾವ ಆಗಿತ್ತು. ಈ ವೇಳೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಹೇಳಿದ್ದರು. ಶಿವಮೊಗ್ಗ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಅಶ್ವಿನಿ ಸಾವನಪ್ಪಿದ್ದಾಳೆ. ಸಾಗರ ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ ಆರೋಪ ಮಾಡಿದ್ದು. ಸಾಗರ ಆಸ್ಪತ್ರೆ ವೈದ್ಯರ ವಿರುದ್ಧ ಅಶ್ವಿನಿ ಕುಟುಂಬಸ್ಥರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ.