ಬೆಂಗಳೂರು : ನಿವೇಶನವನ್ನು ತಮ್ಮ ಪತ್ನಿಯ ಹೆಸರಿಗೆ ಮಾಡಿಸಲು ವ್ಯಕ್ತಿಯೊಬ್ಬರ ಬಳಿ ಪಿಡಿಒ ಅಧಿಕಾರಿ ಒಬ್ಬರು 20,000ಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಈ ವೇಳೆ ಲಂಚ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬೆಳಗೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಟಿ ಬೇಗೂರು ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿ ಶೋಭಾ ರಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ ಎಂದು ತಿಳಿದು ಬಂದಿದೆ.ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿ ಗ್ರಾಮದ ರಮೇಶ್ ಅವರಿಗೆ ಸೇರಿದ ಖಾಲಿ ನಿವೇಶನ ಟಿ.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಸದರಿ ನಿವೇಶನವನ್ನು ತಮ್ಮ ಹೆಂಡತಿಯ ಹೆಸರಿಗೆ ಖಾತಾ ವರ್ಗಾವಣೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು.
ಖಾತೆ ಮಾಡಿಕೊಡುವ ವಿಚಾರವಾಗಿ ಮಧ್ಯವರ್ತಿ ರುದ್ರಪ್ಪ ಮೂಲಕ ಪಿಡಿಒ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಕೊಡುವ ಸಲುವಾಗಿ ರುದ್ರಪ್ಪ ರಮೇಶ್ ಅವರನ್ನು ಪಂಚಾಯಿತಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಲಂಚದ ಹಣ ಸ್ವೀಕರಿಸುವಾಗ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಪವನ್ ನಲ್ಲೂರು ನೇತೃತ್ವದ ತಂಡ ದಾಳಿ ಮಾಡಿದೆ. ತಕ್ಷಣವೇ ಶೋಭಾರಾಣಿ ಮತ್ತು ಹಣ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.