ಶಿವಮೊಗ್ಗ : ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆ ಕೋರರ ಕಿರುಕುಳ ಮಿತಿಮೀರಿರುತ್ತಿದ್ದು ಇವರ ಕಿರುಕುಳದಿಂದ ಇದೀಗ ರಾಜ್ಯದಲ್ಲಿ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸಾಲಗಾರನ ಕಾಟಕ್ಕೆ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಹೌದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ವಿಷ ಸೇವಿಸಿ ಮಹೇಶ (48) ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಯ ಬಳಿ ಮಹೇಶ 5 ಸಾವಿರ ಸಾಲ ಪಡೆದಿದ್ದರು. 5 ಸಾವ್ ಅಸಲಿಗೆ ಬಡ್ಡಿ ಸೇರಿದಂತೆ 9 ಸಾವಿರ ರೂಪಾಯಿ ಸಾಲವಾಗಿತ್ತು.
ಸಾಲ ಹಿಂದಿರುಗಿಸದಕ್ಕೆ ಸಾಲ ನೀಡಿದ ವ್ಯಕ್ತಿ ಮಹೇಶ್ ಅವರ ಬಳಿ ಇದ್ದಂತಹ ಬೈಕ್ ಕಿತ್ತುಕೊಂಡಿದ್ದ. ಇದರಿಂದ ಅವಮಾನ ತಳ್ಳಲಾರದೆ ವಿಷ ಸೇವಿಸಿ ಮಹೇಶ ಆತ್ಮಹತ್ಯೆ ಶರಣಾಗಿದ್ದಾರೆ. ಸದ್ಯ ಹಿರೇಎಡಗೋಡುನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ.ಘಟನೆ ಕುರಿತು ಅನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.