ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ 5 ಪ್ರಮುಖ ಗ್ಯಾರಂಟಿ ಯೋಜನೆ ಜಾರಿ ಮಾಡಿತ್ತು. ಇದರಿಂದ ಕೇಂದ್ರ ಸರ್ಕಾರ ನೀಡಬೇಕಾಗಿದ್ದ ಹೆಚ್ಚುವರಿ ಅಕ್ಕಿಯನ್ನು ಕೊಡುವುದನ್ನು ನಿಲ್ಲಿಸಿತ್ತು. ಆದರೆ ಇದೀಗ ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಒಪ್ಪಿದೆ. ಇದಕ್ಕೆ ಕಾಂಗ್ರೆಸ್ ಟ್ವೀಟ್ ನಲ್ಲಿ ಇದು ಗ್ಯಾರಂಟಿ ಯೋಜನೆಗಳ ಯಶಸ್ಸಿನ ಪರಿಣಾಮ ಎಂದು ಕುಟುಕಿದೆ.
ಹೌದು ಟ್ವೀಟ್ ನಲ್ಲಿ ಕೇಂದ್ರದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕರ್ನಾಟಕದ ವಿಷಯದಲ್ಲಿ ನಿರಂತರ ಅನ್ಯಾಯ ಎಸಗುತ್ತಲೇ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ‘ಹಸಿವು ಮುಕ್ತ ಕರ್ನಾಟಕ’ ಗುರಿಯೊಂದಿಗೆ ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆಗೆ ಅಕ್ಕಿಗಾಗಿ ಬೇಡಿಕೆ ಇಟ್ಟಾಗಲೂ, ಕೆ.ಜಿಗೆ ₹32 ಕೊಟ್ಟು ಖರೀದಿಸುದಾಗಿ ಹೇಳಿದರೂ ಅಕ್ಕಿ ದಾಸ್ತಾನಿಲ್ಲ ಎಂಬ ಕುಂಟು ನೆಪ ಹೇಳಿದ ಕೇಂದ್ರ ಸರ್ಕಾರ, 78,000 ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗಾಗಿ ಕೇವಲ ₹20ಕ್ಕೆ ಕೊಡಲು ನಿರ್ಧರಿಸಿತ್ತು!
ರಾಜ್ಯ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ 5 ಕೆ.ಜಿ ಅಕ್ಕಿಯ ಬದಲಿಗೆ ಹಣ ನೀಡಿ ನುಡಿದಂತೆ ನಡೆದಿತ್ತು. ಆದರೀಗ ವರಸೆ ಬದಲಿಸಿರುವ ಕೇಂದ್ರ ಸರ್ಕಾರ ರಾಜ್ಯ ಕೇಳಿದಷ್ಟು ಅಕ್ಕಿ ಕೊಡುವುದಾಗಿ ಹೇಳಿದೆ! ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸದೆ ಅಕ್ಕಿ ಕೊಡಲು ನಿರಾಕರಿಸಿದವರು ಈಗ ಅಕ್ಕಿ ಕೊಡಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ ಜನಪರ ‘ಗ್ಯಾರಂಟಿ’ ಯೋಜನೆಗಳ ಯಶಸ್ಸಿನ ಪರಿಣಾಮ ಎಂದು ಕಾಂಗ್ರೆಸ್ ತಿಳಿಸಿದೆ.
ಕೇಂದ್ರದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕರ್ನಾಟಕದ ವಿಷಯದಲ್ಲಿ ನಿರಂತರ ಅನ್ಯಾಯ ಎಸಗುತ್ತಲೇ ಇದೆ.
ರಾಜ್ಯ ಕಾಂಗ್ರೆಸ್ ಸರ್ಕಾರ 'ಹಸಿವು ಮುಕ್ತ ಕರ್ನಾಟಕ' ಗುರಿಯೊಂದಿಗೆ ಜಾರಿಗೆ ತಂದ 'ಅನ್ನಭಾಗ್ಯ' ಯೋಜನೆಗೆ ಅಕ್ಕಿಗಾಗಿ ಬೇಡಿಕೆ ಇಟ್ಟಾಗಲೂ, ಕೆ.ಜಿಗೆ ₹32 ಕೊಟ್ಟು ಖರೀದಿಸುದಾಗಿ ಹೇಳಿದರೂ ಅಕ್ಕಿ ದಾಸ್ತಾನಿಲ್ಲ ಎಂಬ… pic.twitter.com/MOIF65fCg5
— Karnataka Congress (@INCKarnataka) January 23, 2025