ಬೆಳಗಾವಿ : ಏನು ಅರಿಯದ 4 ವರ್ಷದ ಕಂದಮ್ಮಳಿಗೆ ಮಲತಾಯಿ ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದು, ಬಳಿಕ ನನ್ನ ಮಗಳು ಫಿಟ್ಸ್ ಇಂದ ಸಾವನ್ನಪ್ಪಿದ್ದಾಳೆ ಎಂದು ಡ್ರಾಮಾ ಮಾಡಿದ್ದ ಮಲತಾಯಿಯನ್ನು ಇದೀಗ ಬೆಳಗಾವಿಯ APMC ಠಾಣೆ ಪೊಲೀಸರು 8 ತಿಂಗಳ ಬಳಿಕ ಬಂಧಿಸಿದ್ದಾರೆ.
ಹೌದು ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಮಗುವಿನ ಕೊಲೆ ಪ್ರಕರಣ ಸಂಬಂಧ ಇಂದು ಸಪ್ನಾ ನಾವಿ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.ಕಳೆದ 8 ತಿಂಗಳ ಹಿಂದೆ ಅಂದರೆ ಮೇ ತಿಂಗಳಲ್ಲಿ ಸಪ್ನಾ ತನ್ನ 4 ವರ್ಷದ ಮಗಳು ಸಮೃದ್ಧಿಯನ್ನು ಕೊಲೆ ಮಾಡಿ, ಫಿಟ್ಸ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಳು.ಆದರೆ ಬಾಲಕಿಯ ಮರಣ್ಣೋತ್ತರ ಪರೀಕ್ಷೆಯಲ್ಲಿ ಮಲತಾಯಿಯ ಘೋರ ಕೃತ್ಯ ಬಯಲಾಗಿದೆ.
ಮರಣ್ಣೋತ್ತರ ವರದಿಯಲ್ಲಿ ಏನಿದೆ?
ಪ್ರಾಥಮಿಕ ತನಿಖೆಯಲ್ಲಿ, ಮಗುವನ್ನು ಕೊಲ್ಲುವ ಉದ್ದೇಶದಿಂದ ಸಪ್ನಾ ನಿಯಮಿತವಾಗಿ ಕಿರುಕುಳ ನೀಡುತ್ತಿದ್ದಳು ಮತ್ತು ಹೊಡೆಯುತ್ತಿದ್ದಳು ಎಂದು ಬೆಳಕಿಗೆ ಬಂದಿದೆ.ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವು ಆಕೆಯ ಮೇಲೆ ನಡೆದ ಹಲ್ಲೆಯ ಗಾಯಗಳಿಂದ ಸಾವನ್ನಪ್ಪಿದೆ ಎಂದು ತಿಳಿದ ತಕ್ಷಣ, ನಾವು ಸಪ್ನಾಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.