ಬೆಂಗಳೂರು : ಈಗಾಗಲೇ ಹೊಸ ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಸೇರಿ ಎಲ್ಲ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಿಸಿರುವ ಬೆನ್ನಲ್ಲೆ ಇದೀಗ ನಮ್ಮ ಮೆಟ್ರೋ ದರ ಏರಿಕೆ ಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ಈ ಸಂಬಂಧ BMRCL ಅಧಿಕಾರಿಗಳ ಮತ್ತು ಫೇರ್ ಹೈಕ್ ಕಮಿಟಿಯ ಹೈವೊಲ್ಟೇಜ್ ಸಭೆ ನಡೆಯಲಿದೆ.
ಸಭೆಯಲ್ಲಿ ದರ ಏರಿಕೆ ಫೈನಲ್ ಆಗುವ ಸಾಧ್ಯತೆ ಇದೆ. ಸಭೆಯಲ್ಲಿ ದರ ಏರಿಕೆ, ಜೊತೆಗೆ ಪರಿಷ್ಕೃತ ದರ ನಿಗದಿ ದಿನಾಂಕ ಕೂಡ ಫೈನಲ್ ಆಗುವ ಸಾಧ್ಯತೆ ಇದೆ.ಕಳೆದ ಏಳು ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಈಗ ದರ ಏರಿಕೆಗೆ ಮುಂದಾಗಿರುವ ಬಿಎಂಆರ್‌ಸಿಎಲ್ ದರ ಏರಿಕೆ ಫೈನಲ್ ಮಾಡುವ ನಿಟ್ಟಿನಲ್ಲಿ ಬೋರ್ಡ್ ಮಿಟಿಂಗ್ ಮಾಡಲಿದೆ.
ಸದ್ಯದ ಮಾಹಿತಿಯಂತೆ ಜನವರಿ 21ರಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾಗಲಿದೆ ಎಂಬ ವರದಿಗಳಿವೆ. ಪ್ರಸ್ತುತ ನಮ್ಮ ಮೆಟ್ರೋ ಕನಿಷ್ಠ ಪ್ರಯಾಣ ದರ 10 ಮತ್ತು ಗರಿಷ್ಠ ದರ 60 ರೂ. ಇದೆ. ದರ ಏರಿಕೆ ಕುರಿತು ವರದಿ ನೀಡಲು ಬಿಎಂಆರ್‌ಸಿಎಲ್ ರಚನೆ ಮಾಡಿದ್ದ ಸಮಿತಿ ವರದಿ ಸಲ್ಲಿಸಿದೆ.
ಕಳೆದ ಏಳು ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಈಗ ದರ ಏರಿಕೆಗೆ ಮುಂದಾಗಿರುವ ಬಿಎಂಆರ್‌ಸಿಎಲ್ ದರ ಏರಿಕೆ ಫೈನಲ್ ಮಾಡುವ ನಿಟ್ಟಿನಲ್ಲಿ ಬೋರ್ಡ್ ಮಿಟಿಂಗ್ ಮಾಡಲಿದೆ. ಬೆಳಗ್ಗೆ 10 ಗಂಟೆಗೆ ಫೇರ್ ಹೈಕ್ ಫಿಕ್ಸೆಷನ್ ಕಮಿಟಿ ಜೊತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಕೂಡ ಭಾಗಿಯಾಗಿ ಫೈನಲ್ ಮಾಡುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ದರ ಏರಿಕೆ ಸಂಬಂಧ ಕಮಿಟಿ 40% ರಿಂದ 45% ಏರಿಕೆಗೆ ಚಿಂತನೆ ನಡೆಸಿದೆ.