ಜ್ಯೋತಿಷ್ಯ ಎನ್ನುವುದು ವೇದದ ಒಂದು ಅಂಗ. ವೇದವು ಷಡಂಗ ಗಳಿಂದ ಕೂಡಿದೆ. ಆರು ಅಂಗಗಳಲ್ಲಿ ಜ್ಯೋತಿಷ್ಯವು ವೇದದ ಕಣ್ಣು ಎಂದೇ ಪರಿಪೂರ್ಣತೆಯನ್ನು ಪಡೆದಿದೆ. ಜ್ಯೋತಿಷ್ಯವು ಸುಳ್ಳು ಎನ್ನುವುದಾದರೆ ವೇದ ಕೂಡ ಸುಳ್ಳು ಎಂದಂತೆ ಆಗುತ್ತದೆ. ವೇದ ಸುಳ್ಳಾದರೆ ಇಂದು ದೇವಾಲಯಗಳಲ್ಲಿ ಮಾಡುವ ಸಕಲ ಪೂಜಾವಿಧಾನಗಳು ಸಕಲ ವೈದಿಕ ಮಂತ್ರಗಳು ಅಷ್ಟಾದಶ ಪುರಾಣಗಳು, ಉಪನಿಷತ್ತುಗಳು, ಭಗವದ್ಗೀತೆ ,ಪಂಚಾಂಗಗಳು (ವಾರ ತಿಥಿ ನಕ್ಷತ್ರ ಯೋಗ ಕರಣ) ಗ್ರಹಣ ಮುಹೂರ್ತಗಳು ಉತ್ಸವಗಳು ರಥೋತ್ಸವಗಳು ದೇವ ಪ್ರತಿಷ್ಠೆಗಳು ಸಂಪ್ರದಾಯಬದ್ಧ ದೈವಿಕ ವಿಷಯಗಳು ಇತ್ಯಾದಿಗಳೆಲ್ಲವೂ
ಕೂಡ ಸುಳ್ಳು ಎಂದಂತೆ ಆಗುತ್ತದೆ.
ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯದ ಬಗ್ಗೆ ಅಲ್ಲಸಲ್ಲದ ಹೇಳಿಕೆಗಳು ಕುಚೋದ್ಯ ಉಕ್ತಿಗಳು ಅಲ್ಲಲ್ಲಿ ಕಂಡುಬರುತ್ತವೆ.
ನವ ನಾಗರಿಕತೆಯು ಪ್ರತಿಯೊಂದನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಸ್ವೀಕರಿಸುವುದರಿಂದ ಜ್ಯೋತಿಷ್ಯವು ಈ ಕಾಲಘಟ್ಟದ ವಿಜ್ಞಾನಕ್ಕೂ ಕೂಡ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯತೆ ಕಡಿಮೆ ಇರುವುದರಿಂದ ಇದರ ಬಗ್ಗೆ ಅವಹೇಳನ ಮಾಡುವ ಒಂದು ಸಮೂಹ ಸೃಷ್ಟಿಯಾದದ್ದು ಸುಳ್ಳಲ್ಲ….! ಅದಕ್ಕಾಗಿಯೇ ಈ ಲೇಖನದ ಮುಖಾಂತರ ಒಂದು ಮುಖ್ಯ ಸಂಗತಿಯನ್ನು ತಿಳಿಯಪಡಿಸುವುದು ನನ್ನ ಉದ್ದೇಶ…
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಇನ್ನೊಬ್ಬರ ಭಾವನೆಗೆ ನೋವಾಗುವಂತೆ ವರ್ತಿಸುವುದು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಎಲ್ಲಿಯೂ ಇಲ್ಲ….
ತಿರುಪತಿಯಲ್ಲಿ, ಧರ್ಮಸ್ಥಳದಲ್ಲಿ, ಸುಬ್ರಹ್ಮಣ್ಯದಲ್ಲಿ ಅಥವಾ ವಿಶೇಷ ಸಾನಿಧ್ಯವಿರುವ ಕ್ಷೇತ್ರಗಳಲ್ಲಿ ದೇವಾಲಯಗಳಲ್ಲಿ ಲಕ್ಷಾಂತರ ಜನ ತಮ್ಮ ಭಾವನೆಗಳೊಂದಿಗೆ ನಿರಂತರವಾಗಿ ಅನುಗ್ರಹಿತ ರಾಗಿ ಇರುವಾಗ ಈ ಎಲ್ಲಾ ದೇವಾಲಯಗಳಲ್ಲಿ ವೇದೋಕ್ತ ಮಂತ್ರಗಳಿಂದ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿಯೊಂದು ಆಚರಣೆಗಳು ಕೂಡ ತಿಥಿ ವಾರ ನಕ್ಷತ್ರ ಸಂವತ್ಸರ ಹೀಗೆ ಪ್ರತಿಯೊಂದು ಕೂಡ ಜ್ಯೋತಿಷ್ಯ ದೊಂದಿಗೆ ಅವಿನಾಭಾವ ಸಂಬಂಧ ದಲ್ಲಿ ನಡೆಯುತ್ತದೆ. ಇಲ್ಲಿ ಜ್ಯೋತಿಷ್ಯವನ್ನು ದೂರುವುದು ಎಂದರೆ ಉಳಿದ ಎಲ್ಲಾ ವಿಷಯಗಳಿಗೂ ಇದು ಅನ್ವಯಿಸುತ್ತದೆ.
ಖಂಡಿತ ಒಂದಂತೂ ಸತ್ಯ ಜ್ಯೋತಿಷ್ಯ ಎಂದರೆ ಬೆಳಕಿನ ಮೂಲಗಳಾದ ಗ್ರಹ ನಕ್ಷತ್ರಗಳ ಶಾಸ್ತ್ರೋಕ್ತವಾದ ಅಧ್ಯಯನ. ಶಾಸ್ತ್ರೋಕ್ತವಾಗಿ ಅನುಷ್ಠಾನ ಗಳಿಂದ ಶ್ರದ್ಧಾ ಭಕ್ತಿಗಳಿಂದ ಜ್ಯೋತಿಷ್ಯವನ್ನು ಅಧ್ಯಯನ ಮಾಡಬೇಕು. ಸುಮ್ಮನೆ ಪುಸ್ತಕಗಳಿಂದ ಇವುಗಳನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಜ್ಯೋತಿಷ್ಯ ಕಾರನು ದೈವಾನುಗ್ರಹ ಸಂಪನ್ನನಾಗಿರಬೇಕು. ಈ ಜ್ಯೋತಿಷ್ಯಶಾಸ್ತ್ರವು ಹಣ ಗಳಿಸಲು ಅಥವಾ ವ್ಯವಹಾರದ ಒಂದು ವಿದ್ಯೆಯಲ್ಲ.
ಜೀವನದ ಮಾರ್ಗದರ್ಶನ ಮಾಡಲು ಅಥವಾ ಇನ್ನೊಬ್ಬರ ಜೀವನದಲ್ಲಿ ಬೆಳಕನ್ನು ತರುವ ಪ್ರಯತ್ನ ಮಾಡುವ ಒಂದು ಶಾಸ್ತ್ರ. ದೇವರ ಪೂಜೆಯು ಹಣದಿಂದ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಜ್ಯೋತಿಷ್ಯವು ಕೂಡ. ಗುರುವಿನಿಂದ ಶಿಷ್ಯರಿಗೆ ಬರುವಂತಹ ಒಂದು ಅಪೂರ್ವವಾದ ವಿದ್ಯೆ ಜ್ಯೋತಿಷ್ಯ ವಾಗಿದೆ. ಇಂದು ಪ್ರತಿಯೊಂದು ರಂಗಗಳಲ್ಲೂ ಒಳ್ಳೆಯದು-ಕೆಟ್ಟದ್ದು ಇದ್ದೇ ಇದೆ. ಹಾಗೆಯೇ ಜ್ಯೋತಿಷ್ಯದಲ್ಲೂ ಕೂಡ ಇಂದು ಹಣದ ಅಪೇಕ್ಷೆಯಿಂದ ಈ ವಿದ್ಯೆಯನ್ನು ದುರುಪಯೋಗ ಮಾಡಿಕೊಂಡವರು ಸಾವಿರಾರು ಮಂದಿ ಇದ್ದಾರೆ. ಅವರ ಮಾತಿಗೆ ಮರುಳು ಹೋಗಿ ಅನೇಕರು ತಮ್ಮ ಹಣ ಮತ್ತು ಅಮೂಲ್ಯವಾದ ಜೀವನದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ. ಅಂದ ಮಾತ್ರಕ್ಕೆ ಜ್ಯೋತಿಷ್ಯವನ್ನು ದೂರುವುದು ಎಷ್ಟು ಸರಿ.
ಒಂದಂತೂ ಸತ್ಯ ಈ ಸಮಾಜದಲ್ಲಿ ಹೆಚ್ಚಿನವರಿಗೆ ಸ್ವಾಭಾವಿಕವಾಗಿಯೇ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಲು ಅನುಕೂಲಗಳನ್ನು ದೇವರು ಕಲ್ಪಿಸಿದ್ದಾನೆ.ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನು ಮನದಟ್ಟು ಮಾಡಿಕೊಂಡು ಜ್ಯೋತಿಷ್ಯ ಶಾಸ್ತ್ರವನ್ನು ನಂಬು ವಾಗ ಜ್ಯೋತಿಷ್ಯ ಕಾರರನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಳ್ಳಿ.
ಒಂದೊಂದು ಜ್ಯೋತಿಷಿಗಳ ವಿಷಯ ಪರಿಹಾರ ಒಂದೊಂದು ತೆರನಾಗಿರುತ್ತದೆ ಏಕೆ??
ಜ್ಯೋತಿಷ್ಯಕ್ಕೂ ಕೂಡ ಸಾವಿರಾರು ಗ್ರಂಥಗಳಿವೆ… ಹಾಗೆಯೇ ಇದು ಅನುಷ್ಠಾನದಿಂದ ಬರುವಂತಹ ಒಂದು ವಿದ್ಯೆ. ಆದುದರಿಂದ ಪ್ರಚ್ಚಕನು ತನ್ನ ಅನುಷ್ಠಾನ ಬಲ ಗಳಿಂದ -ದೈವಿಕ ಬಲ ಗಳಿಂದ ಪರಿಹಾರವನ್ನು ಸೂಚಿಸುವಾಗ ವ್ಯಕ್ತಿಯ ವ್ಯಕ್ತಿತ್ವವನ್ನು ಯೋಗ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಸೂಚಿಸುತ್ತಾನೆ. ಒಂದು ಕಾಲದಲ್ಲಿ ಇದ್ದ ಆಚರಣೆ ಇನ್ನೊಂದು ಕಾಲಘಟ್ಟದಲ್ಲಿ ಅದು ಬದಲಾವಣೆ ಸಂಭವಿಸುವುದು ಸತ್ಯವಾದ ಮಾತು. ಹಾಗೆಯೇ ಕಾಲಾನುಕ್ರಮೇಣ ಕೆಲವು ವಿಷಯಗಳು ಬದಲಾವಣೆ ಹೊಂದಿ ಅದಕ್ಕೆ ಸರಿಯಾದ ಆಚರಣೆಗಳು ಅಥವಾ ಅದಕ್ಕೆ ಸರಿಯಾದ ರೀತಿಯಲ್ಲಿ ಸಮಾಜದಲ್ಲಿ ಬದಲಾವಣೆಗಳು ಸಂಭವಿಸುತ್ತದೆ.
(ಒಬ್ಬನ ಸಾಡೇಸಾತ್ ಶನಿ ಸ್ಥಾನಕ್ಕೆ ಗೆ ಒಂದು ಪರಿಹಾರವಾದರೆ ಮತ್ತೊಬ್ಬರಿಗೆ ಮತ್ತೊಂದು ಪರಿಹಾರ ಇದು. ಅವರವರ ಭಾವನೆಗಳ ಮೇಲೆ ಅವರವರ ಯೋಗ್ಯತೆಗಳ ಮೇಲೆ ನಿಂತಿದೆ)
ಆದ್ದರಿಂದ ಎಲ್ಲಾ ಕಾಲಘಟ್ಟದಲ್ಲೂ ಪ್ರತಿಯೊಂದು ಶಾಸ್ತ್ರಗಳನ್ನು ಆ ಕಾಲಘಟ್ಟಕ್ಕೆ ಮಾತ್ರ ಅನ್ವಯಿಸಿಕೊಂಡು ಹೊಂದಿಕೊಂಡು ಜೀವನ ಸಾಗಿಸುವುದು ಮುಖ್ಯವಾಗುತ್ತದೆ.
ಶಾಸ್ತ್ರಗಳು ಸಂಪ್ರದಾಯಗಳು ಕಾಲದಿಂದ ಕಾಲಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ಒಮ್ಮೊಮ್ಮೆ ಬದಲಾವಣೆ ಸಂಭವಿಸುವುದು ಇದ್ದೇ ಇದೆ. ಹಾಗೆಂದ ಮಾತ್ರಕ್ಕೆ ಇಂದಿನ ತತ್ವಗಳನ್ನು ಅರ್ಥಮಾಡಿಕೊಳ್ಳದೆ ಅದರ ಬಗ್ಗೆ ಪರಿಪೂರ್ಣ ತಿಳಿದುಕೊಳ್ಳದೆ ಅನ್ಯಥಾ ಮಾತನಾಡುವುದು ಸರಿಯಲ್ಲ.
ಸಮಾಜದಲ್ಲಿ ಅನೇಕ ತರದ ಜನರಿರುತ್ತಾರೆ. ಎಲ್ಲರಿಗೂ ತಿಳುವಳಿಕೆ ಇರುವುದಿಲ್ಲ. ಅವರು ಅವರ ನಂಬಿಕೆಗೆ ತಕ್ಕಂತೆ ನೆಡೆದುಕೊಳ್ಳುತ್ತಿರುತ್ತಾರೆ. ತಿಳಿದವನಿಗೆ ಅದು ಮೂಢನಂಬಿಕೆಯಾಗಿ ಕಾಣಬಹುದು. ಆದರೆ ಹೋಗಿ ಅಂತಹ ಜನರನ್ನು ಪರಿಹಾಸ್ಯ ಮಾಡಬಾರದು. ಒಬ್ಬ ಒಂದು ಕಲ್ಲನ್ನು ಅದಕ್ಕೊಂದು ಹೆಸರನ್ನು ಕೊಟ್ಟು ದೇವರೆಂದು ಪೂಜಿಸುತ್ತಿರಬಹುದು. ಆತನ ಅಪಾರ ನಂಬಿಕೆ ಶರಣಾಗತಿ ಆತನನ್ನು ರಕ್ಷಿಸುತ್ತಿರುತ್ತದೆ. ಇದನ್ನು ನೋಡಿ ಪರಿಹಾಸ್ಯ ಮಾಡುವುದು ಮೂಢತನ. ಅವರು ಇಂತಹ ನಂಬಿಕೆಯ ನೆಲಗಟ್ಟಿನಲ್ಲಿ ಜೀವನದಲ್ಲಿ ಭರವಸೆಯಿಂದ ಬದುಕುತ್ತಿರುತ್ತಾರೆ.ಅವರಿಗೊಂದು ಸನಾತನ ಪ್ರಜ್ಞೆ ಇರುತ್ತದೆ. ಸರ್ವಗತ, ಸರ್ವಶಬ್ದವಾಚ್ಯ ಹಾಗು ಸರ್ವಶಕ್ತ ಭಗವಂತ ಆತನಿಗೆ ಕಲ್ಲಿನ ಮುಖೇನ ರಕ್ಷಣೆ ಕೊಡಲೂ ಸಾಧ್ಯವಿದೆಯಲ್ಲವೇ? ಹಾಗೆಯೇ ಜ್ಯೋತಿಷ್ಯವು ಕೂಡ ಅವರವರ ನಂಬಿಕೆಗೆ ಸರಿಯಾಗಿ ಅವರವರ ಭಕ್ತಿಗೆ ವಿಶ್ವಾಸಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ
ಯದ್ಭಾವಂ ತದ್ಭವತಿ..
“ಜೋತಿಷ್ಯ ಮತ್ತು ಪ್ರಶ್ನ ಶಾಸ್ತ್ರ “
ಸಾಮಾನ್ಯವಾಗಿ ಈಗ ಜ್ಯೋತಿಷಿಗಳು ಎಲ್ಲ ಭಾಗದಲ್ಲಿಯೂ ಸಿಗುತ್ತಾರೆ ..ನ್ಯೂಮರಾಲಜಿ …ವೈದಿಕ ಜ್ಯೋತಿಷ್ಯ .. ಪಂಚಾಂಗ ಜ್ಯೋತಿಷ್ಯ ..ಹಸ್ತ ಸಾಮುದ್ರಿಕ, ಕವಡೆ ಶಾಸ್ತ್ರ ,ಮುಖಲಕ್ಷಣ ಜ್ಯೋತಿಷ್ಯ, ಹುಟ್ಟು ಮಚ್ಚೆಗಳನ್ನು ನೋಡಿ ಹೇಳುವವರು ಹೀಗೆ ಹಲವು ರೀತಿ.
ಮನುಷ್ಯನಲ್ಲಿ ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯಲ್ಲಿ ಮುಂದಿನ ಕಾಲಘಟ್ಟದ ಜೀವನವನ್ನು ತಿಳಿದುಕೊಳ್ಳಬೇಕು ಎಂಬ ಉತ್ಸಾಹವಿದ್ದೇ ಇರುತ್ತದೆ. ಈ ರೀತಿಯ ಭವಿಷ್ಯವನ್ನು ಕೇಳಿ ತಿಳಿದುಕೊಳ್ಳುವ , ತಿದ್ದಿಕೊಳ್ಳುವ ಹಾದಿಯಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಜೋತಿಷ್ಯ ಮತ್ತು ಪ್ರಶ್ನ ಶಾಸ್ತ್ರ ಅಭ್ಯಾಸ ಮಾಡುವವರಿಗೆ ದೈವಾನುಗ್ರಹ ಇರಬೇಕು. ಅನುಷ್ಠಾನವಂತರಾಗಿರಬೇಕು.
ಹಿಂದೆ ಜ್ಯೋತಿಷ್ಯ ಹೇಳುವವರನ್ನು ಜ್ಯೋತಿಷಿ ಎಂದು ಕರೆಯುತ್ತಿರಲಿಲ್ಲ ಆತನಿಗೆ ವಿಶೇಷವಾದಂತಹ ದೈವಜ್ಞ ಎಂಬ ಪದವನ್ನು ಪ್ರಯೋಗ ಮಾಡಲಾಗುತ್ತಿತ್ತು …ಈತನಿಗೆ ಗ್ರಹ ವಿಜ್ಞಾನ ಗಣಿತ ಶಾಸ್ತ್ರ ವಿಜ್ಞಾನದ ಪೂರ್ಣ ತಿಳಿವಳಿಕೆ ಹಾಗೂ ಮನಃಶಾಸ್ತ್ರದ ಸಂಪೂರ್ಣ ಪರಿಚಯ ಇರುತ್ತಿತ್ತು … ಜೊತೆಗೆ ವೇದಪಾಠ ಮೂಲಿಕಾ ಶಾಸ್ತ್ರ ,ಯಂತ್ರ ಶಾಸ್ತ್ರಗಳ ಪರಿಚಯ ಇರುತ್ತಿತ್ತು …ಜೊತೆಗೆ ಅತ್ಯಂತ ಶ್ರೇಷ್ಠವಾದ ವೈದಿಕ ಚಿಂತನೆ ಇತ್ತು..ಅಲ್ಲದೆ ಭಗವಂತನ ಅನುಷ್ಠಾನವನ್ನು ತಾನು ಇಟ್ಟುಕೊಂಡಿರುತ್ತಿದ್ದರು ಅನುಷ್ಠಾನವೂ ಎಷ್ಟು ತೀವ್ರವಾಗಿತ್ತೆಂದರೆ ನಿತ್ಯ ಪೂಜೆ ಅನುಷ್ಠಾನ ಜೊತೆಗೆ ತಾನು ಮಾಡುತ್ತಿರುವ ಸಾತ್ವಿಕವಾದ ಜಪ ಮುಗಿಸದೆ ಜ್ಯೋತಿಷ ಹೇಳಲು ತಾನು ಕೂರುತ್ತಿರಲಿಲ್ಲ .ಜಪ ತಪ ಅನುಷ್ಠಾನಗಳು ಇಲ್ಲ ಎ೦ದರೆ ನಾವು ಹೇಳಿದ ಜ್ಯೋತಿಷ ಫಲಿಸುವುದಿಲ್ಲ ಎಂಬುದು ಅವರಿಗೆ ಸಂಪೂರ್ಣವಾಗಿ ಗೊತ್ತಿದ್ದ ವಿಷಯ. ಈ ರೀತಿಯಾಗಿ ತನ್ನ ಅನುಷ್ಠಾನವೆಲ್ಲ ಮುಗಿಸಿದ ಮೇಲೆ ದೈವಜ್ಞ ಭಗವಂತನನ್ನು ತನ್ನ ಮನಸ್ಸಿನಲ್ಲಿ ಸ್ಥಾಪಿಸುತ್ತಾ ಆ ಕ್ಷಣದ ಸಂಪೂರ್ಣ ಗ್ರಹ ಗಣಿತವನ್ನು ಲೆಕ್ಕ ಮಾಡಿ ದಾಖಲು ಮಾಡಿಕೊಂಡು ಹೊರಗೆ ತಾನು ಬಂದು ಕುಳಿತುಕೊಳ್ಳುತ್ತಾರೆ.
ಪ್ರಶ್ನೆಗಾಗಿ ತಾನು ಕುಳಿತುಕೊಂಡ ಗಳಿಗೆಯಿಂದಲೂ ಸಹ ತನ್ನ ಉಸಿರಾಟದ ಏರಿಳಿತಗಳನ್ನು ತನ್ನ ಮನಸ್ಸಿನಲ್ಲಿ ಉಂಟಾಗುವ ಸಮಸ್ತ ಏರುಪೇರುಗಳನ್ನು ಎಲ್ಲವನ್ನೂ ಸಹ ಅಂದಿನ ವಾತಾವರಣದ ಸಮಸ್ತ ಪ್ರಕೃತಿಯ ಸಮತೋಲನ ಅಸಮತೋಲನವನ್ನು ತಲ್ಲಣವನ್ನು ಗಮನಿಸುತ್ತಾ ತಮ್ಮ ಮನಸ್ಸಿಗೆ ಎಲ್ಲವನ್ನೂ ತಂದುಕೊಂಡು ಲೆಕ್ಕಾಚಾರವನ್ನು ಹಾಕುತ್ತಾರೆ…ಪದ್ಮಾಸನದಲ್ಲಿ ಕುಳಿತುಕೊಂಡು ತನ್ನ ಮನಸ್ಸಿನಲ್ಲಿ ಪರಮೇಶ್ವರನನ್ನು ಪ್ರತಿಷ್ಠಾಪಿಸಿ ಆ ದಿನ ನನ್ನನ್ನು ಅರಸಿ ಬರುವ ಮನುಷ್ಯನಿಗೆ ನಾನು ಉತ್ತರವನ್ನು ಕೊಟ್ಟು ಅವರನ್ನು ಸಮಸ್ಯೆಯಿಂದ ಹೊರಗೆ ತರುತ್ತೇನೆ ಎಂಬ ದೃಢವಾದ ವಿಶ್ವಾಸದಿಂದ ..ತನಗೆ ಯಾವುದೇ ಸ್ವಾರ್ಥವಿಲ್ಲದೇ ಕುಳಿತಿರುತ್ತಾರೆ ..ಇಂಥವರು ದಿನಕ್ಕೆ ಸಿಕ್ಕುವುದು ಒಂದರಿಂದ ಎರಡು ಗಂಟೆ ಅವಧಿಯಲ್ಲಿ ಮಾತ್ರ ಹಣಕ್ಕಾಗಿ ಜೀವನೋಪಾಯಕ್ಕಾಗಿ ಇದು ವ್ಯಾಪಾರವಲ್ಲ. ಹಣದಾಸೆಯಿಂದ ಇದನ್ನು ಉಪಯೋಗಿಸಿದರೆ ಅಥವಾ ಸುಳ್ಳು ಕಪಟ ಮಾಡಿದರೆ ಜೀವನ ಪರ್ಯಂತ ಇದರಿಂದ ತೊಂದರೆ ತಪ್ಪಿದ್ದಲ್ಲ.