ಬೆಂಗಳೂರು: ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಂತ ಸಾರಿಗೆ ನೌಕರರಿಗೆ ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಇದೀಗ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂ.ಮ.ಸಾ.ಸಂಸ್ಥೆ, ಕ.ಕ.ರ.ಸಾ.ಸಂಸ್ಥೆ ಮತ್ತು ವಾ.ಕ.ರ.ಸಾ.ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ ನೌಕರರು ಅಂತರ ನಿಗಮ ಸಾಮಾನ್ಯ ವರ್ಗಾವಣೆಗೆ ಕೋರಿಕೆ ಮೇರೆಗೆ 1,252 ನೌಕರರು ಅಂತರ ನಿಗಮ ವರ್ಗಾವಣೆಗೊಂಡಿರುತ್ತಾರೆ. ಸದರಿ ಅಂತರ ನಿಗಮ ವರ್ಗಾವಣೆ ಆದೇಶವನ್ನು ksrtc.karnataka.gov.in ವೆಬ್‌ಸೈಟ್‌ನಲ್ಲಿ ದಿನಾಂಕ:30.12.2024 ರಂದು ಪ್ರಕಟಿಸಲಾಗಿದೆ ಎಂದಿದ್ದಾರೆ.
ಸದರಿ ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲಾಗಿದ್ದು, ವರ್ಗಾವಣೆಯಾಗಿರುವ ನಿಗಮ/ಸಂಸ್ಥೆಗಳಲ್ಲಿನ ಸೇವಾ ಜೇಷ್ಠತೆ ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಕೌನ್ಸಲಿಂಗ್ ಮೂಲಕ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು. ಕೌನ್ಸಲಿಂಗ್ ದಿನಾಂಕ: 15.01.2025 ರಿಂದ 25.01.2025 ರವರೆಗೆ ವೆಬ್‌ಸೈಟ್ www.ksrtc.org/transfer ನಲ್ಲಿ ನಡೆಸಲಾಗುವುದು. ಒಮ್ಮೆ ಆದ್ಯತೆ ಸಲ್ಲಿಸಿದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ ಹಾಗೂ ಈ ಪ್ರಕ್ರಿಯೆಯು ಸಂಪೂರ್ಣವಾಗಿ ಅನ್‌ಲೈನ್‌ನಲ್ಲಿ ನಡೆಯುವುದರಿಂದ ಲಿಖಿತ ಅರ್ಜಿಗಳ ಆಧಾರದ ಮೇಲೆ ಯಾವುದೇ ಕ್ರಮವಹಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
BREAKING: 11ಎ ನಕ್ಷೆ ಮಂಜೂರಾತಿಯಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಕಂದಾಯ ಅಧಿಕಾರಿಗಳು ಸಸ್ಪೆಂಡ್
20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ, ಆದ್ರೂ ಯಾಕಿಂಗಾಯ್ತು?: ಸಿಎಂ ಸಿದ್ಧರಾಮಯ್ಯ ಪ್ರಶ್ನೆ