ಚಿಕ್ಕಮಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಅವಾಚ್ಯ ಪದಗಳ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅರೆಸ್ಟ್ ಆಗಿ ಇದೀಗ ಬಿಡುಗಡೆಯಾಗಿದ್ದಾರೆ. ಇಂದು ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಧಾನ ಪರಿಷತ್ ನಲ್ಲಿಯೇ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನನಗೆ ಧಮ್ಕಿ ಹಾಕಿದ್ದಾರೆ ಎಂದು ಗಂಭೀರವಾದಂತಹ ಆರೋಪ ಮಾಡಿದರು.
ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸದಲ್ಲಿ ಸಿಟಿ ರವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾತ್ರಿ ಇಡೀ ನಾಲ್ಕು ಜಿಲ್ಲೆಯಲ್ಲಿ ವ್ಯಾನ್ ನಲ್ಲಿ ನನ್ನನ್ನು ಸುತ್ತಾಡಿಸಿದ್ದಾರೆ. ಗೂಂಡಾಗಳು ನನ್ನ ಮೇಲೆ ಹಲ್ಲೆಗಯುವಂತಹ ಆಡಿಯೋ ಮತ್ತು ವಿಡಿಯೋ ಕೂಡ ಇದೆ ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಬೇಕು ಎಂದು ಬಿಜೆಪಿ ಆಗ್ರಹಿಸಿದರು.
ಈಗಾಗಲೇ ವಿಧಾನ ಪರಿಷತ್ ಸಭಾಪತಿಗೆ ದೂರು ಕೊಟ್ಟಿದ್ದೇನೆ ಈ ಕುರಿತು ಸಭಾಪತಿಯವರು ಏನು ಕ್ರಮ ಕೈಗೊಳ್ಳುತ್ತಾರೆ ಅಂತ ನೋಡಬೇಕು. ಅಲ್ಲದೇ ಖಾನಾಪುರದಲ್ಲಿ ನನ್ನ ಕೊಲೆ ಯತ್ನದ ಬಗ್ಗೆ ದೂರು ಕೊಟ್ಟಿದ್ದೇನೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲಿಲ್ಲ. ಹೆದರಿಸಿ ಗೂಂಡಾಗಿರಿ ಮಾಡಲು ಪ್ರಜಾಪ್ರಭುತ್ವ ಅವಕಾಶ ನೀಡುವುದಿಲ್ಲ.
ವಿಧಾನಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನನಗೆ ಧಮ್ಕಿ ಹಾಕಿದ್ದಾರೆ. ಡಿಕೆ ಶಿವಕುಮಾರ್, ಚೆನ್ನರಾಜ ಹಟ್ಟಿಹೊಳಿ ಕೂಡ ನನಗೆ ಧಮ್ಕಿ ಹಾಕಿದ್ದಾರೆ. ಸುವರ್ಣ ಸೌಧದಲ್ಲೇ ನನ್ನ ಮೇಲೆ ದಾಳಿಗೆ ಪ್ರಯತ್ನ ನಡೆದಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಮೇರೆಗೆ ನನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ನಾನು ನೀಡಿದ ದೂರಿನ ಮೇಲೆ ಯಾಕೆ ಪೊಲೀಸರು
ಯಾವುದೇ ಕ್ರಮ ಕೈಗೊಳ್ಳಲಿಲ್ಲ? ವಿಧಾನ ಪರಿಷತ್ ನಲ್ಲಿ ನನ್ನ ತಾಯಿ ತಂಗಿ ಪತ್ನಿಯ ಬಗ್ಗೆ ಮಾತನಾಡಿದರು. ಈ ಮಹಾತಾಯಿ ಮಾತನಾಡಿದ್ದನ್ನು ತಾವೆಲ್ಲರೂ ನೋಡಿದ್ದೀರಿ. ರಾತ್ರಿ ಇಡೀ ಊರೂರು, ಕಾಡುಮೇಡು ಸುತ್ತಿಸುವಂತೆ ಆದೇಶ ಇತ್ತ? ಬೆಳಗಾವಿ, ರಾಯಭಾಗ ಲೋಕಾಪುರಕ್ಕೆ ಕರೆದೊಯ್ದಿದ್ದು ಯಾಕೆ? ಎಂದು ಪ್ರಶ್ನಿಸಿದರು.
ಸುವರ್ಣ ಸೌಧದಲ್ಲಿ ನನ್ನ ಮೇಲೆ ದಾಳಿಗೆ ಪ್ರಯತ್ನ ನಡೆದಿತ್ತು. ಖಾನಾಪುರದಲ್ಲಿ ತಲೆಗೆ ಪೆಟ್ಟು ಬಿದ್ದಿತ್ತು.ತಲೆಯಲ್ಲಿ ಸಾಕಷ್ಟು ರಕ್ತ ಸೋರುತ್ತಿದ್ದರು ಚಿಕಿತ್ಸೆ ಕೊಡಿಸಲಿಲ್ಲ. ನಾನು ಮೊದಲು ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ. ಬಳಿಕ ರಾಯಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು. ನನಗೆ ಯಾವುದೇ ಗಂಭೀರವಾಗಿ ಗಾಯವಾಗಿಲ್ಲ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ತಿಳಿಸಿದರು.
ಅವಾಚ್ಯ ಬಳಕೆ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ದೂರು ನೀಡುವ ವಿಚಾರವಾಗಿ ಬಿಜೆಪಿ ಅವರು ಧೃತರಾಷ್ಟ್ರ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಬಿಜೆಪಿಯವರು ಅಂದರೆ ಸಾಮಾನ್ಯ ಕಾರ್ಯಕರ್ತನು ಸೇರಿದಂತೆ ನಾನು ರಾಜ್ಯ ಬಿಜೆಪಿ ಅಧ್ಯಕ್ಷ ನರೇಂದ್ರ ಮೋದಿ ಎಲ್ಲರೂ ಸೇರಿಕೊಳ್ಳುತ್ತೇವೆ. ಬಿಜೆಪಿಯವರು ಧೃತರಾಷ್ಟ್ರ ಅಂದಮೇಲೆ ಯಾಕೆ ದೂರು ಕೊಡುತ್ತಾರೆ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಏನು ಉಪಯೋಗ? ಅವರವರ ಭಾವನೆಗಳಿಗೆ ತಕ್ಕಂತೆ ಯೋಚನೆ ಮಾಡುತ್ತಾರೆ ಅಷ್ಟೇ ಎಂದು ತಿಳಿಸಿದರು.